Tuesday, December 29, 2009

ಯಾಕೆ ಹೀಗೆ !

ವಾರ್ತೆಯಲ್ಲಿ ಕೇಳಿದೆ-ವಿಷ್ಣುವರ್ಧನ ಇನ್ನಿಲ್ಲ ಅಂತ-ಮುಂದುವರಿದು ಶಾಲೆಗೆ ರಜೆ ಅಂತಲೂ ಕೇಳಿದೆ!, ಹಾಗೆ ನಮ್ಮ ಅಶ್ವಥರೂ ಇನ್ನಿಲ್ಲ...
ರಜೆ ಘೋಷಿಸಿ ಏನು ತೋರಿಸಿದಂತಾಯಿತು? ಏನೋ ನನ್ನ ಮನಸ್ಸಿಗೆ ಇದು ಸರಿ ಕಾಣುವುದಿಲ್ಲ, ಎಲ್ಲದರಲ್ಲೂ ಸ್ಪರ್ಧೆಯೇ ಹೊರತು ಬೇರೇನೂ ಇಲ್ಲ...ನಮ್ಮ ಪ್ರತಿಕ್ರಿಯೆಗಳು ಯಾವ ರೂಪ ಪಡಕೊಂಡಿದೆ ಅಂತ ಯೋಚಿಸಿದರೆ ಖೇದವಾಗುತ್ತದೆ...
ನಿಮಗೇನು ಅನಿಸುತ್ತದೆ-ನನ್ನ ಯೋಚನಾ ಲಹರಿ? 

Thursday, December 24, 2009

ಹೊಸ ವರುಷ :)

ಭೌತಿಕವಾಗಿ ಎಲ್ಲ ದಿನಗಳೂ ಬಹುತೇಕ ಒಂದೇ ಆಗಿರುತ್ತವೆ. ಆಯಾ ದಿನದ ಮಹತ್ವ, ಭಾವನಾತ್ಮಕವಾಗಿ ನಿರ್ಧರಿಸಲ್ಪಡುತ್ತದೆ. ಮಾನವನ ಮನಸ್ಸಿಗೆ ಇರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ.'ಹುಟ್ಟಿದ ದಿನ', ಸ್ವಾತಂತ್ರದ ದಿನ', ಹುತಾತ್ಮರ ದಿನ', ...ಹೀಗೆ. ನಾವೇ ನಿರ್ಮಿಸಿದಂತಹ ಈ ದಿನಗಳಿಗೆ ನಮ್ಮ ಮನಸ್ಸು ಎಷ್ಟರ ಮಟ್ಟಿಗೆ ಹೊಂದಿಕೊಂಡಿದೆ ಅಂತ ಯೋಚಿಸಿದರೆ ಬಹಳ ಅಚ್ಚರಿ ಎನಿಸುತ್ತದೆ.
'ಹೊಸ ವರುಷ'- ಹತ್ತಿರ ಬರುತ್ತಾ ಇದೆ, ಹೊಸ ಕನಸುಗಳು, ಯೋಜನೆಗಳು, ಉತ್ಸಾಹ,...ಎಲ್ಲರಲ್ಲಿ...ದಶಂಬರದಲ್ಲೂ ಮಾಡಬಹುದಾದ ಕಾರ್ಯಗಳನ್ನ ಜನವರಿ ಒಂದಕ್ಕೆ ಮಾಡುವುದರಲ್ಲಿ ಏನೋ ಖುಷಿ! ಕೆಲವೊಮ್ಮೆ ಅನಿಸುತ್ತದೆ-ಇದು ಒಂದು ರೀತಿಯ ಪಲಾಯನ ವಾದ ಅಂತ, ಮತ್ತೆ ಯೋಚಿಸುತ್ತೇನೆ-'ಅಯ್ಯೋ ಗೀತ ಅಷ್ಟು ಯೋಚಿಸಬೇಡ ಅಂತ'....
"ಏನೇ ಆಗಲಿ, ಹೊಸ ವರುಷ ಎಲ್ಲರಿಗೂ ಒಳಿತನ್ನೇ ಉಂಟುಮಾಡಲಿ, ಎಲ್ಲೆಲ್ಲಿಯೂ ಶಾಂತಿ-ನೆಮ್ಮದಿ ಇರಲಿ " 

Sunday, December 13, 2009

ನಿವೇದನೆ

ಸಾಕುಪ್ರಾಣಿ-ಪಕ್ಷಿಗಳ ಅಳಲು ಹೀಗಿರಬಹುದೋ ಏನೋ ಅಂತ ಅನಿಸಿದಾಗ ಬರೆದದ್ದು -

"ಬಂಧಿಸಿಡದಿರಿ ನನ್ನ
ಭಾವಚಿತ್ರದ ಚೌಕಟ್ಟಿನೊಳಗೆ

ಸುಂದರವಾದ ಕಲಾಕೃತಿ ಆಗಬೇಕೆಂಬ
ಹಂಬಲ ನನಗಿಲ್ಲ
ಜನಮನ ಸೂರೆಗೊಳ್ಳುವ ಅಂದ
ಬೇಕೆಂಬ ಆಸೆ ನನಗಿಲ್ಲ

ಮತ್ತೇನು ಬೇಡ ನನಗೆ
ಕೊಡುವಿರಾದರೆ ಬಿಟ್ಟುಕೊಡಿ
ಸ್ವಚ್ಚಂದ ಆಗಸದಡಿ ಮನಸೋ ಇಚ್ಚೆ
ಪ್ರಕೃತಿಯ ಅನುಭಸುವ ಅನುಭೂತಿಯ"

Friday, November 27, 2009

ಧರ್ಮದ ಸರಳ ವ್ಯಾಖ್ಯಾನ :)

ನಗುವು ಸಹಜದ ಧರ್ಮ; ನಗಿಸುವುದು ಪರ ಧರ್ಮ|
ನಗುವ ಕೇಳುತ ನಗುವುದತಿಶಯದ ಧರ್ಮ||
ನಗುವು ನಗಿಸುವ ನಗಿಸಿ ನಗುತ ಬಾಳುವ ವರವ|
ಮಿಗೆ ನೀನು ಬೇಡಿಕೊಳೋ - ಮಂಕುತಿಮ್ಮ||
-ಡಿವಿಜಿ

Monday, November 16, 2009

ತಾಯೇ ಇಳಿದು ಬಾ..

ಇತ್ತೀಚಿಗೆ ನನ್ನನ್ನು ಬಾಧಿಸುತ್ತಿರುವ ಸಂಗತಿ - ಪ್ರಕ್ಷುಬ್ಧ ಸಾಮಾಜಿಕ ಸಂಬಂಧಗಳು.
ಮನುಷ್ಯ ಮನುಷ್ಯರ ನಡುವೆ ಬತ್ತಿಹೋಗುತ್ತಿರುವ ವಿಶ್ವಾಸ, ಎಲ್ಲೆಲ್ಲೂ ಕಡಿಮೆಯಾಗುತ್ತಿರುವ 'ನಂಬಿಕೆ', ಹೆಚ್ಚು-ಕಡಿಮೆ ಎಂದು ಅಳೆಯುವ ಪೈಪೋಟಿ, ಅವನನ್ನು ಕೆಳಗೆಳೆದರೆ ಮಾತ್ರ ನಾನು ಮೇಲೇರಬಹುದೆಂಬ ಲಫಂಗತನ,.. ಮೋಸ, ದ್ವೇಷ, ಅಪನಂಬಿಕೆ.. ಇವೆಲ್ಲವನ್ನೂ ಮೀರಿ 'ಏನಾದರೆ ನನಗೇನು' ಎಂಬ indifference. ಒಬ್ಬರಿಗೊಬ್ಬರು ಸಹಕರಿಸಿ, ಪ್ರೀತಿಯಿಂದ, ಸಹನೆಯಿಂದ, ಹಿಂಸೆಮಾಡದೆ ಬದುಕುವಂತೆ ಆಗುವ ನಿಟ್ಟಿನಲ್ಲಿ ನಾನು ಏನೇ ಮಾಡಲು ಸಾಧ್ಯವಿದ್ದರೂ ಮಾಡಬೇಕೆನಿಸುತ್ತೆ... ಏನು ಮಾಡಲಿ?

Monday, November 9, 2009

ಹೀಗೆ...

ಇವತ್ತು ತಲೆ ಬಾಚುವಾಗ ಮನಸ್ಸಿಗೆ ಹೊಳೆದದ್ದು :) - 'ಕೂದಲು ಗಂಟು ಗಂಟಾಗಿತ್ತು, ಯಾವತ್ತು ಉಪಯೋಗಿಸುವ ಬಾಚಣಿಗೆ ಸರಿಯಾಗಲಿಲ್ಲ,ಹಣಿಗೆಯ ಹಲ್ಲುಗಳ ಮಧ್ಯೆ ಹೆಚ್ಚಿನ ಜಾಗ ಇರಬೇಕು, ಆಗ ಗಂಟು ನೋವಾಗದಂತೆ ಬಿಡಿಸಬಹುದು ಅಂತ ಹಣಿಗೆ ಬದಲಾಯಿಸಿದೆ'- ಜೀವನದಲ್ಲೂ ಅಷ್ಟೆ, ಸಮಸ್ಯೆಗಳ ಅಳಕ್ಕೆ ತಕ್ಕಂತೆ, ಪರಿಹಾರ ವಿಧಾನವೂ ಬದಲಾಗುತ್ತದೆ,....ಆದರೆ ಯಾವ ರೀತಿಯ ಪರಿಹಾರ ಬೇಕು ಅನ್ನುವುದರ ಸ್ಪಷ್ಟತೆಯೂ ಅಗತ್ಯ....ಸಿಕ್ಕಾದ ಕೂದಲನ್ನು ಕತ್ತರಿಸಿದರೂ ಸಿಕ್ಕು ಬಿಡುತ್ತದೆ, ಗಂಟಿಲ್ಲದೆ, ಹಾಗೆಯೇ ಪಲಾಯನ ಮಾಡದೇ ಸಮಸ್ಯಗಳ ಸುಳಿಯಿಂದ ಹೊರ ಬರಲಿಕ್ಕೆ ಅದಕ್ಕೆ ತಕ್ಕುದಾದ ಪರಿಹಾರ ಹುಡುಕುತ್ತಾ ಮುಂದೆ ಸಾಗುವುದೇ ಸುಖೀ ಜೀವನದ ರಹಸ್ಯ :)

Thursday, October 29, 2009

"ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ "
-ಡಿ.ವಿ.ಜಿ

ಹೊಂದಾಣಿಕೆ ಮತ್ತು ಲೀನವಾಗುವುದು ಅನ್ನೋದನ್ನ ಕವಿ ಒಂದೇ ಪ್ರಕ್ರಿಯೆ ಅಂತ ಬರೀತಾರೆ. ಇಲ್ಲಿ ಜೀವನದ ಸಿಹಿ ಕಹಿಗೆ ಹೇಗೆ ಸ್ಪಂದಿಸಬೇಕು ಅನ್ನೋದನ್ನ ಹೇಳ್ತಾ ಇರುವ ಹಾಗೆಯೇ 'ತಾನು' ಅನ್ನುವ ಚೌಕಟ್ಟಿನ ಹೊರಗೆ ಬರುವ ಪ್ರಕ್ರಿಯೆಗೆ ನಾಂದಿ ಹಾಕುತ್ತಾರೆ.

Friday, October 16, 2009

Empathy!

ನಾನು ಒಮ್ಮೆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಾಗ ನಡೆದ ಘಟನೆ- ಒಂದು ನಾಯಿ ಮರಿ, ರಸ್ತೆಯನ್ನ ದಾಟುವುದಕ್ಕೆ ಪ್ರಯತ್ನಿಸ್ತಾ ಇತ್ತು, ಆದರೆ ಅದಕ್ಕೆ ಕಾಲು ಊನ, ಹಾಗಾಗಿ ಬಹಳವೇ ಕಷ್ಟಪಟ್ಟು ನಡೆಯಲು ಪ್ರಯತ್ನಿಸುತ್ತಾ ಇತ್ತು, ನಿಂತ ನನ್ನಂತ ಅನೇಕರಿಗೆ ತಳಮಳ-'ಇನ್ನೇನು ಸಿಗ್ನಲ್ ಟೈಮ್ ಆಗುತ್ತೆ, ನಾಯಿ ಇನ್ನು ಅರ್ಧ ದಾರಿ ಕ್ರಮಿಸಿದೆಯಷ್ಟೇ ' ಅಂತ...ಎಲ್ಲಿಂದಲೋ ಒಬ್ಬ ಪುಣ್ಯಾತ್ಮ, ಬಂದು ಆ ಮರಿಯನ್ನ ಎತ್ತಿಕೊಂಡು ಹೊರಟರು, ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟು ಹೊರಟೆ, ಹಾಗೆ ಹೋಗುತ್ತಾ ರಸ್ತೆಯ ಬದಿಗೆ ಹೊರಳಿ ನೋಡಿದೆ-ನಾಯಿಯನ್ನ ಕೆಳಗಿಳಿಸಿದರು ಅವರು, ತಾವು ನಡೆದುಕೊಂಡು ಹೊರಟರು, ಆಗ ಗಮನಿಸಿದೆ- ಆ ವ್ಯಕ್ತಿಗೂ ಕಾಲು ಊನ ಅಂತ! ನನ್ನ ಮನಸಿನಲ್ಲಿ ಈ ಘಟನೆ ಉಳಿದು ಹೋಗಿದೆ-ಕೆಲವರೇ ಮಹಾತ್ಮರು ಯಾಕೆ ಆಗುತ್ತಾರೆ ಅಂತಲೂ ನನಗೆ ತಿಳಿವು ನೀಡಿದ ಘಟನೆ ಇದು.

Thursday, October 15, 2009

ಮನುಷ್ಯ -ವಿರೋಧಾಭಾಸಗಳ ಗೂಡು!

'ನೆರೆ-ಹಾವಳಿ '.....ಎಲ್ಲರ ಬಾಯಲ್ಲಿಯೂ ಸಂತಾಪ, ಅಸಂಖ್ಯಾತ ಜನರು ಸಹಾಯ ಹಸ್ತ ಚಾಚಿದ್ದಾರೆ. ಆದರೆ ದಿನದಲ್ಲಿ ಎರೆಡು ಗಂಟೆ ಹೆಚ್ಚು ದುಡಿಯಬೇಕೆಂದ ಕೂಡಲೇ ಏನಿದು ಅಪಸ್ವರ!ಅದೂ ಒಂದು ನಿರ್ಧಿಷ್ಟ ಅವಧಿಯವರೆಗೆ ಮಾತ್ರ. 'ಅದು ಅವೈಜ್ಞಾನಿಕ' ಅಂತ ಕೂಡ ವಿಮರ್ಶಿಸಿದ್ದಾರೆ, ಆಯಾ ಪ್ರದೇಶದ ಜನರು ಮಾತ್ರ ದುಡಿದರೆ ಸಾಕು ಅಂತ ಇವರ ಅಂಬೋಣ!

ಸಂಕಟದ ಸಮಯದಲ್ಲಿ ಹೆಚ್ಚಿನ ತ್ಯಾಗವನ್ನ ನಾವು ರಾಜಕಾರಣಿಗಳಿಂದ ಅಪೇಕ್ಷಿಸುತ್ತೇವೆ , ಟೀಕೆಯ ಸುರಿಮಳೆಯನ್ನೇ ಹರಿಸುತ್ತೇವೆ, ನಮಗೆ ಮಾತ್ರ ಅದು ಅನ್ವಯ ಆಗುವುದಿಲ್ಲ!ಅದಕ್ಕೆ ಅನ್ನೋದು 'ಹೇಳೋದ್ ವೇದ.......' ಅಂತ

Tuesday, October 13, 2009

ಎರೆಡು ದೇಹ ಎರೆಡು ಜೀವ!

It is said - 'In a team, if 02 people agree to each other on everything, then the team needs only one among those two, and if 02 people don't agree to each other on everything, they both are not required for the team :) !

Monday, October 12, 2009

मुझे फ़खीर बनादे मौला..

A lot of us always want to declare things as 'right or wrong', 'true or false', 'white or black', 'agree or disagree'.

Would someone teach us to understand life situations without having to analyse?
To not rationalise emotions? To love madly?
To believe without proof? To not eat for days and just sing...and dance in the streets..
Not to hear, but listen. Not to talk and talk but convey..
Not to fight ..but have nothing to lose?

Would someone please teach us to be a Raadha?
To be a Fakhir?

मुझे फ़खीर बनादे मौला..

Sunday, October 11, 2009

"ಬೇಸರಾಗಿದೆ ಮಾತು, ಭಾರವಾಗಿದೆ ಮೌನ, ನೋವು ಕರಗಿದೆ ಕಣ್ಣಲಿ, ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೇ ಮುರಿದಂತೆ.."
'ಅಡಿಗರ ಸಾಲುಗಳು ಅಂತ ನೆನಪು, (ತಪ್ಪಿದ್ದರೆ ಹೇಳಿ), ಕೆಲವೊಮ್ಮೆ ಮೇಲಿನ ಸಾಲುಗಳು ವ್ಯಕ್ತಿಯ ದುಗುಡವನ್ನ ಬಹಳವೇ ಸರಿಯಾಗಿ ವ್ಯಕ್ತಪಡಿಸುತ್ತವೆ, ಪ್ರತಿಬಿಮ್ಬಿಸ್ತಾವೆ.

Friday, October 9, 2009

'ಹುಟ್ಟು' 'ಸಾವು' ಯಾರ ಕೈಯಲ್ಲೂ ಇಲ್ಲ ಅನ್ನುವುದನ್ನ ದೈನಂದಿನ ಜೀವನದಲ್ಲಿ ಕಾಣ್ತಾನೆ ಇರ್ತಿವಿ...YSR ಹಾಗೆ ಪ್ರಸ್ತುತ ಪ್ರವಾಹದಲ್ಲಿ ಆದ ಪ್ರಾಣಹಾನಿ, ಅಪಘಾತಗಳು, ಹೀಗೆ...ಆದರೆ ಯಾರ ಜೀವಕ್ಕೆ ಹೆಚ್ಚು ಬೆಲೆ ಅಂತ ಯಾರಿಗಾದರೂ ನಿರ್ಧರಿಸುವ ಹಕ್ಕಿದೆಯ? ವ್ಯಕ್ತಿಯೋರ್ವ ಉನ್ನತ ಸ್ಥಾನದಲ್ಲಿದ್ದಾನೆ ಅಂದ ಕೂಡಲೇ, ಅವನ ಪ್ರಾಣ ಕಾಪಾಡಲಿಕ್ಕೆ ಏನೆಲ್ಲ ಮಾಡಬಹುದೋ ಎಲ್ಲವನ್ನೂ ಮಾಡುವುದು, ಮಾಡಲಿ ಒಳ್ಳೆಯದೇ, ಆದರೆ ಅದರಷ್ಟಲ್ಲವಾದರೂ ಅದರ ಅರ್ಧದಷ್ಟದರೂ ಪ್ರಯತ್ನ ಸಾಮಾನ್ಯ ಜನರಿಗೆ ಮಾಡುವುದಿಲ್ಲ ಏಕೆ? ಅದರಲ್ಲೂ ತಮ್ಮ ಸ್ವಾರ್ಥ ಸಾಧನೆ ನೋಡಬೇಕೇ? ನಮ್ಮ ವ್ಯವಸ್ಥೆಯ ದುರಂತ :(

Wednesday, October 7, 2009

ತೆರೆದಷ್ಟೇ ಬಾಗಿಲು..

ಮತ್ತೇ.... ಯಾವುದರ ಬಗ್ಗೆಯಾದರೂ ಹುಚ್ಚು ಹಿಡಿದು ಮಾಡಿದಾಗ ಅಲ್ಲಿ ಹುಟ್ಟುವಂಥದ್ದು ವಿಶಿಷ್ಟವಾಗಿಯೇ ಇರುತ್ತೆ... ಗೀತೆ ಹೇಳಿದ್ದನ್ನು ಒಪ್ಪುತ್ತೇನೆ, ಎಲ್ಲರೂ ಮಾಡುವಂಥದ್ದನ್ನು ಸುಮ್ಮನೆ follow ಮಾಡದೆ ಅದರ ಆಚೆ ನಿಂತು ನೋಡಿದರೇನೇ ಅಸಾಧಾರಣವಾದದ್ದು ಏನೋ ಸಿಗುವುದು!
Title: ಜಯಂತ ಕಾಯ್ಕಿಣಿಯವರಿಂದ ಕದ್ದದ್ದು

Saturday, October 3, 2009

ಯಾವುದರ ಬಗ್ಗೆಯಾದರೂ ಹುಚ್ಚು ಹಿಡಿದು ಮಾಡಿದಾಗ ಅಲ್ಲಿ ಹುಟ್ಟುವಂಥದ್ದು ವಿಶಿಷ್ಟವಾಗಿಯೇ ಇರುತ್ತೆ... ಎಚ್ಚರದಲ್ಲಿ, ಕಣ್ಣು ತೆರೆದು ಮಾಡಿದ್ದಕ್ಕಿಂತ.
ಹುಚ್ಚು.. ಅಲೆಮಾರಿತನಕ್ಕೆ ಹೇಳಲಾಗದ ಸಂಕಟದೊಂದಿಗೆ ಅಸಾಮಾನ್ಯ mysticism ಇರುತ್ತೆ.. ನಿಜವಾದ ಹೊಸತನ್ನು ಹುಟ್ಟಿಸುವಂಥದ್ದು.

ಸೌಮ್ಯಾ

Friday, October 2, 2009

Following Gandhi

M.K Gandhi did not join any of the great celebrations of India's Independence; for him it constituted both a national & personal failure.
During the last months of his life Gandhi felt violence drawing nearer to him. He viewed partition & the appalling bloodshed as his own failure.
On his last birthday he famously replied to a friend: 'Send me condolences, not congratulations.'
: From the book, "Gandhi" by Peter Ruhe.

What do we think of Partition today? Who is Gandhi for us, the present generation?
Do most of us think he is outdated for the present challenges?

Albert Einstein who witnessed Gandhi's life said, "Generations to come will find it hard to believe that a man such as Gandhi ever walked the face of this earth!"

Looking closely at his life, I do understand what Einstein must have meant, .. without meaning to be fascinated by the man even a bit.

But, I wonder, what does he mean to us today?

Wednesday, September 30, 2009

ನಮಸ್ಕಾರ,
ಈ ಸಂವಾದ ಏಕ ಮುಖವಾಗಿದೆ ಅಂತ ನನಿಗೆ ಅನ್ನಿಸುತ್ತಿದೆ, ನಿಮ್ಮ ಮಾತುಗಳಿಲ್ಲದೆ ಆ ಅಂದ ಇರದು, ದಯಮಾಡಿ ನಿಮ್ಮ ಅನಿಸಿಕೆಗಳನ್ನೂ ಬರೆಯಿರಿ
ಪ್ರೀತಿಯಿಂದ ಗೀತೆ

Tuesday, September 29, 2009

"ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕೆ
ಕೂಸು ಕಂದಯ್ಯ ಒಳ ಹೊರಗ
ಆಡಿದರೆ ಬೀಸಣಿಕೆ ಗಾಳಿ ಸುಳಿದಾವ"

ಮನುಷ್ಯ ತನ್ನದೇ ಪ್ರತಿರೂಪ ಕಂದನಲ್ಲಿ ಕಾಣುವಾಗ ಎಷ್ಟು ಖುಶಿಯನ್ನ ಅನುಭವಿಸ್ತಾನಲ್ಲ್ವ !!
ಏನೊಂದನ್ನೂ ಬಾಯಿಂದ ಆಡದೆ ತನ್ನೆಡೆಗೆ ಎಲ್ಲರ ಸೆಳೆವ ಮಗುವಿನ ಮುಗ್ದತೆಗೆ ಮರುಳಗದವರೂ ಇರ್ತಾರೆಯೇ?

Saturday, September 26, 2009

ಶಾರದೆಯ ಸ್ತುತಿ

"ಶರಧಿ ಚಂದ್ರನ ಕಿರಣಗಳ, ಧಿಕ್ಕರಿಪ ಶುಕ್ಲ ಅಂಬರದ, ಪದ ನೂಪುರದ ಕಾಂತಿಯ, ಕಂಕಣದ ಕಿನ್ಕಿನಿಯ ಜುನ್ಕ್ಲ್ರುತಿಯ, ಕೊರಳ ಹಾರದ, ಕರುಣಾ ಪೂರದ ಕರದಾ ವೀಣೆಯ ಪುಸ್ತಕದ, ಶುಭಕರ ವದನೆ ವಾಗ್ ದೇವಿ ರಕ್ಷಿಸು ನಮ್ಮನು ಅನವರತ".... ನನಗೆ ಬಹಳ ಇಷ್ಟವಾದ ಸಾಲುಗಳು :)

ಬನ್ನಿ ಮಾತಾಡುವ

ನಮಸ್ಕಾರ :)
'ನಮ್ಮ ಮಧ್ಯೆ' ಹೆಸರೇ ಹೇಳುವಂತೆ ಇದು 'ನನ್ನ' ಮತ್ತು 'ನಿಮ್ಮ' ನಡುವಿನ ಸಂವಾದ. ಈ ಸಂಭಾಷಣೆಗೆ ಪ್ರೇರಣೆ 'ಉಷೆ', ನನ್ನ ಸ್ನೇಹಿತೆಯ ಸಹೋದರಿ. ನನ್ನೆದೆಯ ಕದಲಿಕೆಗಳ ನಿಮ್ಮ ಮುಂದಿಡುವ ಅಸೆ, ನಿಮ್ಮಲ್ಲಿ ಹಂಚಿಕೊಳ್ಳುವ ಅಸೆ, ನಿಮ್ಮ ಸಹಕಾರದಿಂದ ಅದನ್ನು ಅಕ್ಷರಗಳಲ್ಲಿ ಕೂಡಿಡುವ ಬಯಕೆ, ಈ ನನ್ನ ಬಯಕೆಯ ಮೊಳಕೆಗೆ ನೀರೆರೆದು ಪೂಶಿಸುತ್ತೀರೆಂದು ನನ್ನ ನಂಬಿಕೆ.