Thursday, October 29, 2009

"ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ "
-ಡಿ.ವಿ.ಜಿ

ಹೊಂದಾಣಿಕೆ ಮತ್ತು ಲೀನವಾಗುವುದು ಅನ್ನೋದನ್ನ ಕವಿ ಒಂದೇ ಪ್ರಕ್ರಿಯೆ ಅಂತ ಬರೀತಾರೆ. ಇಲ್ಲಿ ಜೀವನದ ಸಿಹಿ ಕಹಿಗೆ ಹೇಗೆ ಸ್ಪಂದಿಸಬೇಕು ಅನ್ನೋದನ್ನ ಹೇಳ್ತಾ ಇರುವ ಹಾಗೆಯೇ 'ತಾನು' ಅನ್ನುವ ಚೌಕಟ್ಟಿನ ಹೊರಗೆ ಬರುವ ಪ್ರಕ್ರಿಯೆಗೆ ನಾಂದಿ ಹಾಕುತ್ತಾರೆ.

3 comments:

  1. ಒಂದಾಗುವುದೂ ಹೇಗೆ! ಬೆಟ್ಟದಡಿ ಹುಲ್ಲಾಗಿ, ಮನೆಗೆ ಮಲ್ಲಿಗೆಯಾಗಿ, ದೀನ ದುರ್ಬಲರಿಂಗೆ ಬೆಲ್ಲವಾಗಿ..

    ಯಾವುದರೊಂದಿಗೆ ಇರುತ್ತೇವೆಯೋ ಅದರ ಗುಣಗಳಿಗೆ ಪೂರಕವಾಗಿ, ತಮ್ಮ ತನವನ್ನೂ ರೂಪಿಸಿಕೊಂಡು, ಅದರ ಅಗತ್ಯಗಳಿಗೂ ಉತ್ತರವಾಗಿ, ಒಟ್ಟೂ ಪೂರ್ಣತೆಯನ್ನು ಒಟ್ಟಿಗೆ ಕಾಣುವಂತೆ! ಹಾಗೆಯೇ, ಪ್ರಕೃತಿ ಬೆಳೆಯಬೇಕಾದಲ್ಲಿ ನಮ್ಮ ಗುಣ, ಧರ್ಮ ಹೇಗಿರಬೇಕು ಅನ್ನುವುದನ್ನು ಎಷ್ಟು ಸುಂದರವಾಗಿ ಕವಿ ಇಲ್ಲಿ ತಿಳಿಸಿದ್ದಾರೆ! ಈ ಸತ್ಯ ಪ್ರಕೃತಿಗೆ, ಸಮಾಜದಲ್ಲಿ ನಮ್ಮ ಪಾತ್ರಕ್ಕೆ, ಒಂದು ಗುಂಪು/ ಮನೆ/ ಕುಟುಂಬದ ಒಳಿತಿನಲ್ಲಿ ಒಬ್ಬ ವ್ಯಕ್ತಿಯ ಜವಾಬ್ದಾರಿ..ಎಲ್ಲವಕ್ಕೂ ಅನ್ವಯಿಸುತ್ತದೆ. ಒಂದಕ್ಕೊಂದು ಸಂಬಂಧವನ್ನೂ ಕವಿ ಇಲ್ಲಿ ಸೂಕ್ಷ್ಮವಾಗಿ ಅಭಿವ್ಯಕ್ತಿಸಿದ್ದಾರೆ.
    ಹೀಗಿಲ್ಲದೆ 'ನಾನು'ಗಳೇ ಹೆಚ್ಚಾದಂತೆ ವಿನಾಶವೇ ಗತಿ.

    ReplyDelete
  2. interesting :)

    ReplyDelete
  3. Very interesting kavana...thanks geete.

    ReplyDelete