ನಮಸ್ಕಾರ :) 'ನಮ್ಮ ಮಧ್ಯೆ' ಹೆಸರೇ ಹೇಳುವಂತೆ ಇದು 'ನನ್ನ' ಮತ್ತು 'ನಿಮ್ಮ' ನಡುವಿನ ಸಂವಾದ. ಈ ಸಂಭಾಷಣೆಗೆ ಪ್ರೇರಣೆ 'ಉಷೆ', ನನ್ನ ಸ್ನೇಹಿತೆಯ ಸಹೋದರಿ. ನನ್ನೆದೆಯ ಕದಲಿಕೆಗಳ ನಿಮ್ಮ ಮುಂದಿಡುವ ಅಸೆ, ನಿಮ್ಮಲ್ಲಿ ಹಂಚಿಕೊಳ್ಳುವ ಅಸೆ, ನಿಮ್ಮ ಸಹಕಾರದಿಂದ ಅದನ್ನು ಅಕ್ಷರಗಳಲ್ಲಿ ಕೂಡಿಡುವ ಬಯಕೆ, ಈ ನನ್ನ ಬಯಕೆಯ ಮೊಳಕೆಗೆ ನೀರೆರೆದು ಪೂಶಿಸುತ್ತೀರೆಂದು ನನ್ನ ನಂಬಿಕೆ... ಭಾವನೆಗಳ, ಅನಿಸಿಕೆಗಳ ತೆರೆದಿಡ ಬಯಸುವ ಎಲ್ಲರೂ ಈ ವೇದಿಕೆಯನ್ನು ಉಪಯೋಗಿಸಬಹುದು.... 'ಗೀತೆ':)
Monday, November 9, 2009
ಹೀಗೆ...
ಇವತ್ತು ತಲೆ ಬಾಚುವಾಗ ಮನಸ್ಸಿಗೆ ಹೊಳೆದದ್ದು :) - 'ಕೂದಲು ಗಂಟು ಗಂಟಾಗಿತ್ತು, ಯಾವತ್ತು ಉಪಯೋಗಿಸುವ ಬಾಚಣಿಗೆ ಸರಿಯಾಗಲಿಲ್ಲ,ಹಣಿಗೆಯ ಹಲ್ಲುಗಳ ಮಧ್ಯೆ ಹೆಚ್ಚಿನ ಜಾಗ ಇರಬೇಕು, ಆಗ ಗಂಟು ನೋವಾಗದಂತೆ ಬಿಡಿಸಬಹುದು ಅಂತ ಹಣಿಗೆ ಬದಲಾಯಿಸಿದೆ'- ಜೀವನದಲ್ಲೂ ಅಷ್ಟೆ, ಸಮಸ್ಯೆಗಳ ಅಳಕ್ಕೆ ತಕ್ಕಂತೆ, ಪರಿಹಾರ ವಿಧಾನವೂ ಬದಲಾಗುತ್ತದೆ,....ಆದರೆ ಯಾವ ರೀತಿಯ ಪರಿಹಾರ ಬೇಕು ಅನ್ನುವುದರ ಸ್ಪಷ್ಟತೆಯೂ ಅಗತ್ಯ....ಸಿಕ್ಕಾದ ಕೂದಲನ್ನು ಕತ್ತರಿಸಿದರೂ ಸಿಕ್ಕು ಬಿಡುತ್ತದೆ, ಗಂಟಿಲ್ಲದೆ, ಹಾಗೆಯೇ ಪಲಾಯನ ಮಾಡದೇ ಸಮಸ್ಯಗಳ ಸುಳಿಯಿಂದ ಹೊರ ಬರಲಿಕ್ಕೆ ಅದಕ್ಕೆ ತಕ್ಕುದಾದ ಪರಿಹಾರ ಹುಡುಕುತ್ತಾ ಮುಂದೆ ಸಾಗುವುದೇ ಸುಖೀ ಜೀವನದ ರಹಸ್ಯ :)
Subscribe to:
Post Comments (Atom)
No comments:
Post a Comment