Monday, November 16, 2009

ತಾಯೇ ಇಳಿದು ಬಾ..

ಇತ್ತೀಚಿಗೆ ನನ್ನನ್ನು ಬಾಧಿಸುತ್ತಿರುವ ಸಂಗತಿ - ಪ್ರಕ್ಷುಬ್ಧ ಸಾಮಾಜಿಕ ಸಂಬಂಧಗಳು.
ಮನುಷ್ಯ ಮನುಷ್ಯರ ನಡುವೆ ಬತ್ತಿಹೋಗುತ್ತಿರುವ ವಿಶ್ವಾಸ, ಎಲ್ಲೆಲ್ಲೂ ಕಡಿಮೆಯಾಗುತ್ತಿರುವ 'ನಂಬಿಕೆ', ಹೆಚ್ಚು-ಕಡಿಮೆ ಎಂದು ಅಳೆಯುವ ಪೈಪೋಟಿ, ಅವನನ್ನು ಕೆಳಗೆಳೆದರೆ ಮಾತ್ರ ನಾನು ಮೇಲೇರಬಹುದೆಂಬ ಲಫಂಗತನ,.. ಮೋಸ, ದ್ವೇಷ, ಅಪನಂಬಿಕೆ.. ಇವೆಲ್ಲವನ್ನೂ ಮೀರಿ 'ಏನಾದರೆ ನನಗೇನು' ಎಂಬ indifference. ಒಬ್ಬರಿಗೊಬ್ಬರು ಸಹಕರಿಸಿ, ಪ್ರೀತಿಯಿಂದ, ಸಹನೆಯಿಂದ, ಹಿಂಸೆಮಾಡದೆ ಬದುಕುವಂತೆ ಆಗುವ ನಿಟ್ಟಿನಲ್ಲಿ ನಾನು ಏನೇ ಮಾಡಲು ಸಾಧ್ಯವಿದ್ದರೂ ಮಾಡಬೇಕೆನಿಸುತ್ತೆ... ಏನು ಮಾಡಲಿ?

9 comments:

 1. ನೀವು ಹೇಳಿರುವ ವಿಷಯ ಗಳಿಗೆ ಒಂದು ಇಹ್ ಕಾರಣನು ಇರಬಹುದು ಅನ್ನಿಸುತ್ತೆ .

  ಗಾಂಧಿ ಬಯಸಿದ್ದೇನು ಗ್ರಾಮ್ಯ ರಾಜ್ಯ .ಅವರು ಇಂಗ್ಲೆಂಡ್ ಸಮಾಜ ವನ್ನ ರೋಗಗ್ರಸ್ತ ಸಮಾಜ ಅಂತ ಹೇಳಿದ್ರು .ಬಹುಷಃ ನಮ್ಮ ಸಮಾಜ ಈಗ , ೬೦ ವರುಷ ದ ಹಿಂದೆ ಬ್ರಿಟೀಶ್ ಸಮಾಜ ಹೇಗಿತ್ತು ಹಾಗೆ ಇದೆ ಅನ್ನಿಸುತ ಇದೆ .ಇದಕ್ಕೆ ನೆಹರು ಕಾರಣ .ಅವರ ಒಲವು ನಗರ ಜೀವನಕ್ಕೆ ಇತ್ತು

  ಇಹ್ ನಗರೀಕರಣ ದಿಂದ ಎಲ್ಲಡೆ ಪೈಪೋತಿ,ತಾವು ಮುಂದೆ ಬರಲು ಏನು ಮಾಡಲು ಹೇಸದ ಜನರು .ಜ್ಯೋತೆಗೆ
  ಇಹ್ ವ್ಯವಸ್ತೆ
  ಇಂದ ಸಮಾಜ ದಲ್ಲಿ ಸಮಾನತೆ ಗಿಂತ
  ಅಸಮಾನತೆ
  ಜಾಸ್ತಿ
  ಆಗ್ತಾ ಇದೆ . ಶ್ರೀಮಂತರು ಜಾಸ್ತಿ ಶ್ರೀಮಂತ ರಗ್ತಾ ಇದ್ದಾರೆ ಬಡವರು ಜಾಸ್ತಿ ಬಡವರಗ್ತಾ ಇದ್ದಾರೆ ಕೆಲವು ಸಲ ಅನ್ನಿಸುತ್ತೆ ಗಾಂಧಿ ಹೇಳಿದ್ದೆ ನಮ್ಮ ದೇಶ ಕ್ಕೆ ಸರಿಯಾದ್ದು ಅಂತ .
  ಎಲ್ಲೂ ಬೇಡ ನಮ್ಮ ಆಫೀಸ್ ಟೀಂ ನ ನೋಡಬೇಕು ಇರುದು ೫ ಜನ ಒಬ್ರುನ ಕಣ್ರೆ ಇನ್ನೊಬ್ರು ಗೆ ಆಗುಲ್ಲ
  ಒಬ್ರು ಗೆ ಒಂದು Appreciation ಸಿಕ್ಕಿದ್ರೆ ಇನೋಬನಿಗೆ ಹೊಟ್ಟೆ ಊರಿ .ನೋಡಿ ನೋಡಿ ಸಾಕಾಗಿ ಹೋಗಿದೆ .
  IT ಅಷ್ಟು ಕುಲಗೆತ್ತಿ ಹೋಗಿರುವ industry ಯಾವದು ಇಲ್ಲ ಅನ್ನಿಸುತ್ತೆ .

  ಉಪೇಂದ್ರನ ರಕ್ತ ಕಣ್ಣಿರು dialogue ಇಲ್ಲಿ ಸೂಕ್ತ ಅನ್ನಿಸುತ್ತೆ
  http://www.youtube.com/watch?v=03nfZ03Tp58

  ReplyDelete
 2. ತಮಾಷೆ ಎಂದರೆ, ನಿಜಕ್ಕೂ ಎಲ್ಲರಿಗೂ ಹೀಗೇ ಅನಿಸುತ್ತಾ ಇರುತ್ತೆ. ಆದರೆ ಅಭಿವ್ಯಕ್ತಿಯಲ್ಲಿ ಮನುಷ್ಯ ಪ್ರೀತಿಗೆ, ಔದಾರ್ಯಕ್ಕೆ ಹೆದರುತ್ತಾನೆ. ನಾವು ಸರಿಯಾದರೆ ಜಗತ್ತೇ ಸರಿಯಾದಂತೆ ಎಂದು ತಿಳಿದುಕೊಂಡು ನಾವು ಹೆಚ್ಚು ಪ್ರೀತಿಸುವುದು, ಉದಾರಿಗಳಾಗುವುದು - ಇಷ್ಟೇ ನಾವು ಮಾಡಬಹುದಾದ್ದು. ಅದು ಜಗತ್ತನ್ನು ಅಷ್ಟಿಷ್ಟು ಬದಲಾಯಿಸಿಯೇ ಬದಲಾಯಿಸುತ್ತದೆ, ನೋಡುತ್ತಿರಿ!

  ReplyDelete
 3. ಶ್ರೀಧರ.. ಈ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತರೂ ಸಾಮಾನ್ಯರೂ ಆದ ನಮ್ಮಂತವರು ಹೇಗಿರಬೇಕು, ಏನು ಮಾಡಬೇಕು ಅನ್ನಿಸುತ್ತೆ ನಿಮಗೆ....?
  ನರೇಂದ್ರರೇ, ನಿಮ್ಮ ವಿಚಾರ ಓದಿ ಒಂದು ರೀತಿ ಸಮಾಧಾನವಾಯಿತು, ಹೌದು ಎನ್ನಿಸಿತು

  ReplyDelete
 4. ನರೇಂದ್ರ ಅವರು ಹೇಳಿದ್ದು ಸರಿ ನಾನು ಸಂಪೂರ್ಣ ವಾಗಿ ಒಪ್ಪುತೀನಿ . ಬೇರೆ ಅವರು ತಪ್ಪು ಮಾಡಿದ್ರು ಅಂತ ನಾವು ತಪ್ಪು ಮಾಡದೇ ತಾಳ್ಮೆ ಗೆಡದೆ ನಾವು ಸರಿ ಆಗಿ ಇದ್ರೆ ಎಲ್ಲ ತಾನೇ ತಾನಾಗಿ ಸರಿ ಹೋಗುತ್ತೆ ಅನ್ನಿಸುತ್ತೆ .ಆದರೆ ತುಂಬ ಸಲ ನಾವು ಹಾಗೆ ಮಾಡುಲ್ಲ .ಇದುಕೆಲ್ಲ
  ಒಂದು ಕಾರಣ ನಮ್ಮ ಅತಿ ಯಾದ ಆಸೆ ,ಸ್ವಾರ್ಥ ಅನ್ನಿಸುಲ್ವ ನಿಮಗೆ?

  ReplyDelete
 5. ನರೇಂದ್ರ ಅವರು ಹೇಳಿದಂತೆ.....ಒಳ್ಳೆಯದಾಗಬೇಕೆಂಬ ಇಚ್ಛೆ ಹೆಚ್ಚಿನವರಲ್ಲಿದೆ-ಅದು ನಿಜಕ್ಕೂ ಮನಸ್ಸಿಗೆ ಸಮಾಧಾನ ಕೊಡುವ ವಿಷಯ. 'ಎಲ್ಲ ದಿಕ್ಕಿನಲ್ಲಿಯೂ ಹಿಂಸೆ-ಅಪ ನಂಬಿಕೆ ಮನೆ ಮನೆ ಮಾಡಿದೆ' ಅನ್ನುವ ಹಿನ್ನಲೆಯಲ್ಲಿ ಒಳಿತಿನ ಹಾದಿಯಲ್ಲಿ ಕಾರ್ಯ ಪ್ರವೃತ್ತ ಆಗುದಕ್ಕಿನ್ತಲೂ, 'ಹೆಚ್ಚಿನವರು ನನ್ನಂತೆ ಶಾಂತಿ-ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟಿದ್ದಾರೆ' ಅನ್ನುವ ಭಾವನೆಯಿದ್ದರೆ ಮುಂದುವರಿಯಲು ಹೆಚ್ಚು ಸಹಕಾರಿ ಅಂತ ನನ್ನ ಭಾವನೆ. ಮನಸ್ಸಿನಾಳದ ಕದಲುವಿಕೆಗಳು ಎಲ್ಲರಲ್ಲೂ ಒಂದೇ, ಹೊರ ನೋಟಕ್ಕೆ, ನಡವಳಿಕೆಯಲ್ಲಿ ವ್ಯಕ್ತವಾಗುವಾಗ ಯಾವ ಯಾವ ಅಂಶಗಳು ಪ್ರಭಾವ ಬೀರುತ್ತವೆ ಅನ್ನುವುದರ ವಿಶ್ಲೇಷಣೆ ಅಗತ್ಯ.

  ReplyDelete
 6. ಎಲ್ಲರೂ ಒಳ್ಳೆ ಯವರಗಬೇಕು ಅಂತ ಅಂದುಕೊಳುತ್ತಾರೆ ಅದು ನಿಜ .ಆದರೆ ಬಹಳಷ್ಟು ಜನ ತಾವು ಮಾಡುತಿರುವುದು ಒಳ್ಳೆಯದು ಅಂತ ತಿಳಿದು ಕೊಂಡಿರುತ್ತಾರೆ ಆದರೆ ಅಹ ಅವರ ಕೃತ್ಯಗಳು ಬೇರೆ ಅವರಿಗೆ ತೊಂದರೆ ಆಗುತ್ತಿರಬಹುದು ಅಥವಾ ಕೆಟ್ಟದ್ದು ಅನ್ನಿಸುತ್ತ ಇರಬಹುದು .
  ಇಲ್ಲಿ ಕೆಲವರಿಗೆ ಒಳ್ಳೆಯದು ಅನ್ನಿಸಿದ್ದು ಬೇರೆ ಅವರಿಗೆ ಕೆಟ್ಟದ್ದು ಅನ್ನಿಸುವ ಸಾದ್ಯತೆ ಇದೆ ಅಲ್ವ.
  ಈಗ ತಾಲಿಬಾನ್ ಅವರು WTC ನ ನಾಶ ಮಾಡಿದ್ದೂ ಕೆಟ್ಟದ್ದು ಅನ್ನುತಾರ ?
  ಎಲ್ಲರಿಗೂ ಒಳ್ಳೆಯದು ಅನ್ನಿಸುವುದು ಯಾವುದು?

  ReplyDelete
 7. ಹೌದು, ಶ್ರೀಧರ ಅವರು ಹೇಳಿದಂತೆ ನಾವು ಮಾಡುವುದು ಜನರ ಹಿತಕ್ಕಾಗಿ, ಲೋಕದ ಒಳಿತಿಗಾಗಿ ಅಂತಾನೆ ಮಾಡುವವರು ಹೇಳೋದು.
  ಇನ್ನೊಂದು specific ಉದಾಹರಣೆ ತೆಗೆದುಕೊಳ್ಳೋಣ. ಶಿವಸೇನೆಯವರು ಮಹಾರಾಷ್ಟ್ರದಲ್ಲಿ ಮಾಡುತ್ತಿರುವುದು ಏನು? ಮರಾಠ ಭಾಷೆ ಜನರ ಹಿತದ ಹೆಸರಲ್ಲಿ ದ್ವೇಷ ಬಿತ್ತುತ್ತಿದ್ದಾರೆ, ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಮಾಡುವುದರಿಂದ ಆ ಭಾಷೆಗಾಗಲಿ ಜನರಿಗಾಗಲೀ ಒಳ್ಳೆಯದಾಗುವುದಾದರೂ ಹೇಗೆ!
  ಇದು ನನ್ನ ಅನಿಸಿಕೆ. ಅದೇ, ಅವರ ಬೆಂಬಲಿಗರಿಗೆ, ಇಲ್ಲಿನ ಕನ್ನಡಸೇನೆಯವರಿಗೆ ಅವರ ಕೃತ್ಯಗಳು ಸರಿ ಕಾಣಿಸಬಹುದು. ಈ ಸಂದರ್ಭದಲ್ಲಿ, ಪ್ರೀತಿ ಹಂಚುವುದು, ಶಾಂತಿಯಿಂದ ಒಂದಾಗಿ ಬಾಳುವುದು ಎಂದರೇನು?

  ReplyDelete
 8. ಮನುಷ್ಯನ ಅಪೇಕ್ಷೆ ,ಸಹಜವಾಗಿ
  ಇನ್ನೊಬ್ಬರು ಹೀಗಿರಬೇಕು ,ಅಂತಲ್ಲದೆ
  ತಾನು ಹೀಗಿರಬಹುದೇ ಅಂತ ಇಲ್ಲವಲ್ಲ
  ಅದುವೇ ಇಯೆಲ್ಲ ಸಮಸ್ಯೆಗಳಿಗೆ ಕಾರಣ.
  ನಾವೆಲ್ಲ ಮನುಸ್ಯರು ಅನ್ನುವುದು
  ನೂರಕ್ಕೆ ನೂರು ನಿಜ
  ಏನಂತಿರ?

  ReplyDelete