ಸಾಕುಪ್ರಾಣಿ-ಪಕ್ಷಿಗಳ ಅಳಲು ಹೀಗಿರಬಹುದೋ ಏನೋ ಅಂತ ಅನಿಸಿದಾಗ ಬರೆದದ್ದು -
"ಬಂಧಿಸಿಡದಿರಿ ನನ್ನ
ಭಾವಚಿತ್ರದ ಚೌಕಟ್ಟಿನೊಳಗೆ
ಸುಂದರವಾದ ಕಲಾಕೃತಿ ಆಗಬೇಕೆಂಬ
ಹಂಬಲ ನನಗಿಲ್ಲ
ಜನಮನ ಸೂರೆಗೊಳ್ಳುವ ಅಂದ
ಬೇಕೆಂಬ ಆಸೆ ನನಗಿಲ್ಲ
ಮತ್ತೇನು ಬೇಡ ನನಗೆ
ಕೊಡುವಿರಾದರೆ ಬಿಟ್ಟುಕೊಡಿ
ಸ್ವಚ್ಚಂದ ಆಗಸದಡಿ ಮನಸೋ ಇಚ್ಚೆ
ಪ್ರಕೃತಿಯ ಅನುಭಸುವ ಅನುಭೂತಿಯ"
ಮುಕ್ತ ಆಗಸದಲ್ಲಿ
ReplyDeleteಅರಿವಿನೆತ್ತರದಲ್ಲಿ
ಅಲೆದಾಟ
ಹಾರಾಟ
ಪಕ್ಷಿಗಳಿಗೇನು ?
ಮಾನವನೂ ಬಯಸುವ
ಜನುಮ ಜನುಮದ ಕನಸಲ್ಲವೇ ?
ಚೆನ್ನಾಗಿದೆ .ಬರೆಹ .
ಥ್ಯಾಂಕ್ಸ್, ಖುಷಿಯಾಯ್ತು :).
ReplyDeleteಖಂಡಿತ, 'ಸ್ವಾತಂತ್ರ' ಅನ್ನೋದು ಮನುಷ್ಯರಿಗೂ ಇಷ್ಟವೇ, ಅದು ಗೊತ್ತಿದ್ದೂ, ಅನ್ಯ ಜೀವಿಗಳ ಹಕ್ಕನ್ನ ಕಸೀತಾರಲ್ಲ ಅಂತ ಬೇಸರ, ಪ್ರಾಣಿ-ಪಕ್ಷಿಗಳು ಮನುಜನ ಜೀವನದಲ್ಲಿ interfere ಆಗುವುದಿಲ್ಲವಲ್ಲ !