Friday, October 9, 2009

'ಹುಟ್ಟು' 'ಸಾವು' ಯಾರ ಕೈಯಲ್ಲೂ ಇಲ್ಲ ಅನ್ನುವುದನ್ನ ದೈನಂದಿನ ಜೀವನದಲ್ಲಿ ಕಾಣ್ತಾನೆ ಇರ್ತಿವಿ...YSR ಹಾಗೆ ಪ್ರಸ್ತುತ ಪ್ರವಾಹದಲ್ಲಿ ಆದ ಪ್ರಾಣಹಾನಿ, ಅಪಘಾತಗಳು, ಹೀಗೆ...ಆದರೆ ಯಾರ ಜೀವಕ್ಕೆ ಹೆಚ್ಚು ಬೆಲೆ ಅಂತ ಯಾರಿಗಾದರೂ ನಿರ್ಧರಿಸುವ ಹಕ್ಕಿದೆಯ? ವ್ಯಕ್ತಿಯೋರ್ವ ಉನ್ನತ ಸ್ಥಾನದಲ್ಲಿದ್ದಾನೆ ಅಂದ ಕೂಡಲೇ, ಅವನ ಪ್ರಾಣ ಕಾಪಾಡಲಿಕ್ಕೆ ಏನೆಲ್ಲ ಮಾಡಬಹುದೋ ಎಲ್ಲವನ್ನೂ ಮಾಡುವುದು, ಮಾಡಲಿ ಒಳ್ಳೆಯದೇ, ಆದರೆ ಅದರಷ್ಟಲ್ಲವಾದರೂ ಅದರ ಅರ್ಧದಷ್ಟದರೂ ಪ್ರಯತ್ನ ಸಾಮಾನ್ಯ ಜನರಿಗೆ ಮಾಡುವುದಿಲ್ಲ ಏಕೆ? ಅದರಲ್ಲೂ ತಮ್ಮ ಸ್ವಾರ್ಥ ಸಾಧನೆ ನೋಡಬೇಕೇ? ನಮ್ಮ ವ್ಯವಸ್ಥೆಯ ದುರಂತ :(

5 comments:

 1. ನಮ್ಮ ವ್ಯವಸ್ಥೆ ಸರಿ ಇಲ್ಲ ಒಪ್ಕೋತೀನಿ .ಆದರೆ ನಮ್ಮ ಜನರು ಏನು ತುಂಬ ಒಳ್ಳೆ ಅವರ .ನಿಮಗೆ ಹಿಂದೆ ಹೇಳಿದ್ದೆ ಅನ್ಸುತೆ .ಯಾರು ಹೇಳಿದ್ರು ಅನ್ನುದು
  ಮರೆತೇ ."ನಮ್ಮ ದೇಶ ದ ಜನರು ಜಾತಿ,ಧರ್ಮ ಮತ್ತು ದೇವರ ಹೆಸರಿನಲ್ಲಿ ಮನುಷತ್ವ ನೆ ಮರೆತಿದ್ದಾರೆ ಅಂತ "
  ಈಗ ಮುಖ್ಯ ಮಂತ್ರಿ ನೆ ಇರಬಹುದು ಅಥವಾ ಯಾರೇ VIP ಇರಬಹುದು ಅವರು ಅದು ಅಗುವುದುಕಿಂತ ಮುಂಚೆ ಸಾಮಾನ್ಯ ವ್ಯಕ್ತಿ ಆಗಿರುತ್ತಾರೆ ತಾನೇ.
  ನಮ್ಮ ಜನರು ಸರಿ ಆದರೆ ವ್ಯವಸ್ತೆ ನು ಸರಿ ಹೋಗುತ್ತೆ ಎಲ್ಲ ಸರಿ ಹೋಗುತ್ತೆ ಅನ್ನುದು ನನ್ನ ಭಾವನೆ .
  ಒಂದು ಸಣ್ಣ ಉದಾಹರಣೆ ಕೊಡುತೀನಿ .ನಾವು ಬಸ್ ನಲ್ಲಿ ಪ್ರಯಾಣ ಮಾಡುವಾಗ ಕೆಲವು ಸಲ ಸೀಟ್ ಇರುಲ್ಲ ತುಂಬ ರಶ್ ಇರುತ್ತೆ .ಯಾರೋ ವಯಸ್ಸಾದವರು ನಿಂತಿರುತಾರೆ ,ಎಷ್ಟು ಜನ ಮದ್ಯಮ ವಯಸ್ಸಿನವರು ಎದ್ದು ಅವರಿಗೆ ಸೀಟ್ ಕೊಡುತಾರೆ ?

  ReplyDelete
 2. Interesting subject..we may be in democracy sysytem ..but we are not following democracy system completely. We follow groupism, casteism,differennt religions,and languages.one small example is after the flood in karnataka and andhra, central govt released more relief fund to andhra and he first visited andhra , not karnataka.what it means ? again politics or same party is ruling andhra.like that even people of our country support this system just because they enjoy it.
  secondly giving full security or respect to their chair is not an issue.having majority support and being public figure must be protected, because those people are assets for the country.wheather they are good or bad..we need to support this system.this system followed since ancient times.may be this is different period than earlier days.
  it is not possible to change the system until there is a big revolution in the system.
  finaly, eating different food is in our hand.but digestion is not in our hand...
  so hope for the best.let creator do his job.he know to do the changes as and when he want.
  thanks

  ReplyDelete
 3. ನೀವು ಹೇಳಿದ್ದು ಅಕ್ಷರಶಃ ಸತ್ಯ, ನಾನಿಲ್ಲಿ ಜನರ ಬಗ್ಗೆಯೇ ಹೇಳಿದ್ದು, ಬರೇ ಅಧಿಕಾರದಲ್ಲಿರುವವರ ಬಗ್ಗೆ ಮಾತ್ರ ಅಲ್ಲ, ವ್ಯವಸ್ಥೆ ಹೇಗಿದೆ ಅನ್ನೋದಕ್ಕೆ ಖಂಡಿತ ಜನರೂ ಹೊಣೆ.
  ಮೊನ್ನೆ ಆಟೋದಲ್ಲಿ ಹೋಗುವಾಗ ಡ್ರೈವರ್ ಹೇಳಿದ್ದು - "ನೋಡಿ ಮೇಡಂ ಇಲ್ಲಿ ಒಂದು ತೆರೆದ ಬಾವಿ ಇದೆ, ನೀರು ತುಂಬಿದರೆ ಗೊತ್ತಾಗಲ್ಲ, ಈ ಸರಕಾರ ಏನೂ ಮಾಡಲ್ಲ...." ಅಂತ. ಅದಿಕ್ಕೆ ನಾನ್ ಹೇಳ್ದೆ- " ಅದ್ಹೇಗ್ರಿ ಸರಕಾರಕ್ಕೆ ಗೊತ್ತಾಗುತ್ತೆ ಇಲ್ಲಿ ಬಾವಿ ಇದೆ ಅಂತ ನೀವೇನಾದ್ರೂ ಕಂಪ್ಲೇಂಟ್ ಕೊಟ್ಟಿದೀರ ? ಅಷ್ಟಕ್ಕೂ ಅದು ರಸ್ತೆಯ ಆಚೆ ಬದಿಯಲ್ಲಿರುವ ಖಾಸಗಿ ಜಾಗ" ಅಂತ. ಆಗ ಹೇಳ್ತಾನೆ- " ಅದು ಸರಿ ಮೇಡಂ ಆದ್ರೆ ರಸ್ತೆ ಸರಿ ಮಾಡೋರು ಅದನ್ನು ನೋಡ್ಬೇಕು!", ನೋಡಿ ಈ ರಸ್ತೆ ಸರಿ ಮಾಡೋ ಕೆಲಸದಲ್ಲಿ ನಮ್ಗೆ ಬಹಳ ಕಷ್ಟ ಅಗೊಗ್ ಬಿಟ್ಟಿದೆ".
  Now the fact is here in Mangalore they r putting concrete roads, definitely inconvenience is felt, but I have seen people making their way by all sorts which is only hindering the progress, but they feel it is only Govt body which is responsible, very strange, they always think people in power can do miracles, but never once stop to think how much cooperation they should extend.

  ReplyDelete
 4. ನೀವಿಬ್ಬರು ಹೇಳಿದನ್ನು ನಾನು ಸಂಪೂರ್ಣವಾಗಿ ಒಪ್ಪುತೀನಿ. ನೀವು ಆಟೋ ಚಾಲಕನ ಬಗ್ಗೆ ಹೇಳಿದಿರಲ್ಲ ಬಹುಷಃ ನಾನು ಅದೇ ಸ್ಥಾನ ದಲ್ಲಿ ಇದ್ದೀನಿ ಅನ್ನಿಸುತ್ತ ಇದೆ .
  ನನ್ನ ಒಂದು ಅನುಭವ ನಾನು ಹೇಳಲು ಇಚ್ಚಿಸುತ್ತೇನೆ .

  ಇದು ಆಗಿದ್ದು ಸುಮಾರು ೨ ವರುಷ ದ ಹಿಂದೆ .ನಮ್ಮ ಆಫೀಸ್ ಬೆಂಗಳೂರಿನಲ್ಲಿ ೨ ಕಡೆ ಇದೆ .೨ ರ ನಡುವೆ ಸುಮಾರು ೧೬-೧೮ ಕಿ.ಮಿ ದೂರ ಇದೆ.
  ನನಗೆ ಒಂದು ಆಫೀಸ್ ಇಂದ ಇನೊಂದು ಆಫೀಸ್ ಗೆ ನಡೆದು ಕೊಂಡು ಹೋಗಬೇಕು ಅನ್ನಿಸಿತು. ಆದರೆ ದಾರಿ ಸರಿಯಾಗಿ ಗೊತ್ತಿರಲಿಲ್ಲ .ಅದ್ರು ಹೊರಟೆ .
  ಸರಿ ಸ್ವಲ್ಪ ದೂರ ಹೋದ ಮೇಲೆ ಹೇಗೆ ಹೋಗಬೇಕೆಂದು ಅನುಮಾನ ಬಂತು .ಆಗ ಒಬ್ಬ ವ್ಯಕ್ತಿ ಒಂದು ೨೦ ವರುಷ ಇರಬಹುದು ಅಲ್ಲೇ ಹೋಗುತಿದ್ದ .ದೊಮ್ಮಳುರ್ ಗೆ ಹೇಗೆ ಹೋಗಬೇಕಂದು ಕೇಳಿದಾಗ -ಅವನು ಬಸ್ ನಲ್ಲಿ ಆದ್ರೆ ಹೀಗೆ ಆಟೋ ದಲ್ಲಿ ಆದ್ರೆ ಹೀಗೆ ಹೋಗಬೇಕೆಂದ. ನಡೆದುಕೊಂಡು ಹೋಗುವುದು ಹೇಗೆ ಅಂದಾಗ ಅದು ತುಂಬ ದೂರ ಅಂತ ಹೇಳಿ ನನಗೆ ಸ್ವಲ್ಪ ದುಡ್ಡನ್ನು ಕೊಡಲುಬಂದು ಹೇಳಿದ - "ಸರ್ ನಾನು ಕೂಲಿ ಮಾಡುತ್ತಿರುವುದು ನನ್ನ ಹತ್ರ ಇಷ್ಟೇ ದುಡ್ಡು ಇದೆ ಅಂತ "
  ನಾನು ಅವನಿಗೆ ದುಡ್ಡು ನನ್ನ ಹತ್ರ ಇದೆ ಅಂತ ಹೇಳಿ ದಾರಿ ನ ಕೇಳಿದೆ ..

  ಇತರಹದ ಜನರು ಎಷ್ಟು ಜನರು ಇದ್ದಾರೆ ಹೇಳಿ

  ReplyDelete
 5. By seeing how people are contributing for the needy (flood-affected), I would like to change my view on this topic.

  ReplyDelete