Saturday, May 1, 2010

ಅಂತೂ college life ಇನ್ನು ಕೆಲವೇ ದಿನಗಳು ಅಷ್ಟೇ.. farewell ದಿನದ ನಂತರ ಈ levelಗೆ ಬೇಸರ ಆಗತ್ತೆ ಅಂತ ಅಂದ್ಕೊಂಡೇ ಇರ್ಲಿಲ್ಲ.. classಗೆ late entry ಕೊಟ್ಟಿದ್ದು.. ಚೆನ್ನಾಗ್ ಪಾಠ ಮಾಡೋದಿದ್ರೆ ಕೇಳೋದು, ಇಲ್ದೆ ಇದ್ರೆ ತೂಕಡ್ಸೋದು , ಚಿತ್ತಾರ ಬಿಡ್ಸೋದು , ಕತೆ ಪುಸ್ತಕ ಓದೋದು.. ಚೆನ್ನಾಗಿ seminars present ಮಾಡಿದ್ದು.. ಮಧ್ಯಾಹ್ನ ಗೆಳತಿಯರೆಲ್ರು ಒಟ್ಟಿಗೆ ಕೂತು lunch box ಹಂಚಿದ್ದು.. ಲ್ಯಾಬ್ ಲಿ ಮನ್ಸಾದಾಗ ಭಯಂಕರ ಉತ್ಸಾಹದ ಕೆಲ್ಸ, ಇಲ್ದೆ ಇದ್ರೆ ಬೇಕಾ ಬಿಟ್ಟಿ ಕೆಲ್ಸ.. ಹಂಗೆ ನಡು ನಡುವೆ ನಮ್ಮ college ಪಕ್ಕದ್ canteenಗೆ ಹೋಗಿ ಮುಕ್ಕಿದ್ದು, ಇಲ್ಲ aunty shopಗೆ ಹೋಗಿ slice ಇಲ್ಲ ಎಳನೀರು ಕುಡ್ದಿದ್ದು.. ಸಂಜೆ ಹೊತ್ತು ಕಲ್ಲು benchಲಿ ಕೂತು ಹರಟೆ ಹೊಡಿದು, ನಮ್ದೇ ಗಲಾಟೆಲಿ ವಾಪಸ್ ಬಂದಿದ್ದು.. full dress up ಆಗ್ಕೊಂಡು ಹೋದಾಗ ಸಿಕ್ಕಿದ compliments.. campusಲಿ ನಡಿಯೋ ಎಲ್ಲ festsಲಿ ಅರಚಿದ್ದು.. ಎರಡು ವರ್ಷ ಹಾಡೋ ಸ್ಪರ್ಧೆಗಳಿಗೆ ಮಾಡಿದ ತಯಾರಿ.. ಪೂರ್ತಿ semesterದು records ಒಂದೇ ವಾರದಲ್ಲಿ ಬರಿಯೋ ತಾಕತ್ತು.. exams ಹತ್ರ ಬಂದಂಗೆ ಮಾಡಿದ notesದು ಅಟ್ಟಿಗಟ್ಲೆ xerox.. ಪ್ರತೀ ಸಲ examಲಿ ಪೂರ್ತಿ ಬರ್ದೇ ಆಗಿಲ್ಲ ಅಂತ ಅಳು ಮುಖ ಮಾಡ್ಕೊಂಡು ಬಂದಿದ್ದು.. ಗೆಳತಿಯರಿಗೆ ಪ್ರೀತಿಯೊಂದ ಕೊಟ್ಟ ಪುಟ್ಟ gifts.. ಎಲ್ಲ ಸಂತೋಷದ ಕ್ಷಣಗಳು, ಕಾಲ್ ಎಳ್ದಿದ್ದು, ತಮಾಷೆ ಮಾಡಿರೋದು, ಸಿಟ್ಟು ಜಗಳ ಸಮಾಧಾನ ಮಾಡ್ಕೊಂಡಿದ್ದು, ಅತ್ತಿರೋದು.. ನಿಜಕ್ಕೂ universityಲಿ ಕಳೆದ ಈ ಎರಡು ವರ್ಷ ಅದ್ರಲ್ಲೂ, ಕೊನೆ ಎರಡು semesters have been special 2 me..

3 comments:

  1. ಕಾಲೇಜು ಜೀವನದ ಮಧುರ ನೆನಪುಗಳನ್ನು ಮತ್ತೆ ನೆನಪಿಸಿಕೊಡುವ ಆಪ್ತ ಬರಹ,
    ನನ್ನ ಜೀವನದ ಸುಂದರ ಸಮಯವನ್ನು ಕಣ್ಣಮುಂದೆ ತಂದು,ಖುಷಿಕೊಟ್ಟಿತು.
    ಧನ್ಯವಾದಗಳು..

    ReplyDelete
  2. ನಮ್ಮ ಪರವಾಗಿ ನೀವು ಬರೆದ ಹಾಗಿದೆ ನಿಮ್ಮ ಬರಹ:) ಚೆನ್ನಾಗಿದೆ.

    ReplyDelete
  3. ಹಾ ಸ್ವಾತಿ,

    ಕಳೆದ ದಿನಗಳು care free ದಿನಗಳು :). "ಸವಿ ನೆನಪುಗಳು ಬೇಕು ಸವಿಯಲೀ ಬದುಕು."...ನಮಗೂ ನಮ್ಮ ಮುಕ್ತ ದಿನಗಳ ನೆನಪು ಮೂಡಿಸಿತು-ಈ ಬರಹ, ಚೆನ್ನಾಗಿದೆ :)

    ReplyDelete