ಪ್ರತಿ ದಿನವೂ ನನಗೆ ಅನಿಸುವುದಿದೆ- "ಈ ಹೊತ್ತಿಗೆ ನಾನು ಪ್ರಬುದ್ಧಳಿದ್ದೇನೆ, ನನ್ನ ವಿಚಾರಗಳು, ನಂಬಿಕೆಗಳು, ಸರಿಯಾಗಿವೆ, ಕೆಲ ಸಮಯದ ಹಿಂದಿನ ನನ್ನ ವರ್ತನೆಗಳು-ಮಾತುಗಳು ನನಗೆ ನಗು ತರಿಸುತ್ತವೆ, ಅಯ್ಯೋ ಹೀಗೆನ್ದವಳು ನಾನೇನ!"
ಅಲ್ಲೇ ನೋಡಿ ಇರೋದು ಜೀವನದ ಸ್ವಾರಸ್ಯ, ಈ ಚಿಂತನೆ ನನಗೆ ಒಂದು ಸತ್ಯದ ಅರಿವನ್ನ ಮೂಡಿಸುತ್ತದೆ-ಈ ದೇಹ ಇರುವಲ್ಲಿಯವರೆಗೂ ಅನುದಿನ, ಅನುಕ್ಷಣ ಮಾನಸಿಕವಾಗಿ ಕಲಿಯುತ್ತಲೇ ಇರುತ್ತೇನೆ ಅಂತ. " I have arrived" ಅಂತ ಅನ್ನುವ ಹೇಳಿಕೆಯೇ ಬಾಲಿಶ ಅಂತನಿಸುತ್ತದೆ.
ನಿಮಗೂ ಹೀಗೆ ಅನ್ನಿಸುತ್ತ? ಕಲಿಯುವಿಕೆ ನಿರಂತರ ಅನ್ನುವ ಭಾವನೆ ನಿಮ್ಮ ಅನುಭವಕ್ಕೂ ಬಂದಿದೆಯ? ಅಥವಾ ನನ್ನ ಆಲೋಚನಾ ಲಹರಿಯೇ ತಪ್ಪಾ?
ಜೀವನದಲ್ಲಿ ಎಷ್ಟೇ ಕಲಿತರೂ ಇನ್ನು ಕಲಿಯುವುದು ತುಂಬಾ
ReplyDeleteಇರುತ್ತದೆ ಎಂದು ನಂಗೆ ತುಂಬಾ ಸಲ ಅನ್ನಿಸಿದೆ,
ನಾವು ಇದ್ದಷ್ಟಕ್ಕೆ ನಾವೇ ಬುದ್ದಿವಂತರೆಂದು ಅಹಂಕಾರ ಪಡುವುದು
ಬಾಲಿಷತನ
ಒಳ್ಳೆಯ ಮಾತುಗಳು ನಿಮ್ಮದು
ಹೆಚ್ಚು ಕಲಿತಂತೆ ನಾವು ಏನೂ ಕಲಿತಿಲ್ಲ ಎನಿಸತೊಡಗುತ್ತೆ..ಅಲ್ಲವೇ..ಅದೇ ಲಹರಿಯ ಚಿಂತನೆ ನಿಮ್ಮದು..ತಪ್ಪಿಲ್ಲ ಪ್ರಬುದ್ಧತೆಯೆಡೆಗೆ ಸಾಗಿದ್ದೀರಿ ಎಂದೇ ಹೇಳಬಹುದು..ಎಷ್ತು ದೂರ ಇದು ನಿಮ್ಮ ಪ್ರಶ್ನೆಗಲ ಮೇಲೆ ಅವಲಂಬಿಸಿರುತ್ತೆ...
ReplyDeleteಹುಟ್ಟಿನಿ೦ದ ಸಾಯುವವರೆಗೂ ಪ್ರತಿಕ್ಶಣವೂ ಕಲಿಯುತ್ತಲೆ ಇರುವುದು ಮಾನವನ ಬೌಧ್ಧಿಕ ಲಕ್ಶಣ.
ReplyDeleteಅದಿಲ್ಲದಿದ್ದ ಸಮಯದಲ್ಲಿ ಆತ ಸತ್ತ ಹಾಗೆಯೆ.... !
ಚಿ೦ತನಾಲಹರಿ ಉತ್ತಮವಾಗಿದೆ.
ಹಾ..ಮನಸ್ಸಿಗೆ ಒಂದು ರೀತಿಯ ಸಮಾಧಾನ!
ReplyDeleteಮತ್ತೆ, "ದಿನ ದಿನವೂ ಕಲಿಯುತ್ತಲೇ ಇದ್ದೇನೆ" ಅಂತ ಅನ್ನುವ ನನ್ನ ಬಗ್ಗೆಯ ತಿಳುವಳಿಕೆಯೇ ತಪ್ಪು ಅನ್ನಿಸುವಂತೆ ಕೆಲವೊಮ್ಮೆ ತಪ್ಪಿನ ಪುನರಾವರ್ತನೆ ಆಗುವುದುಂಟು! ಬಹುಶ: ನಿರಂತರ ಕಲಿಯುವಿಕೆಯಿಂದ ಪಕ್ವವಾಗುವುದು ಅಂದರೆ ಹೀಗೆ ಇರಬೇಕು.
ಅಥವಾ "ಕಲಿಯುತ್ತೇನೆ" ಅನ್ನುವ ಕ್ರಿಯೆಯ ಹಿಂದೆ, ಮಾನಸಿಕವಾಗಿ ಬಹಳ ಸಿದ್ಧತೆಗಳು ನಡೆಯಬೇಕು-ಮೊದಲಾಗಿ humbleness ಇರಬೇಕು, ನನ್ನ ಅನುಭವಗಳು, ಸ್ಥಾನ-ಮಾನ, ವಯಸ್ಸು...ಹೀಗೆ ಇವೆಲ್ಲವನ್ನೂ ಮೆಟ್ಟಿ ನಿಂತರೆ ಕಲಿಯುವ ಕ್ರಿಯೆಗೆ ನ್ಯಾಯ ಒದಗಿಸಿ ಕೊಟ್ಟಂತಾದೀತು...ಅಲ್ಲವೇ?
ಖಂಡಿತ. ಕಲಿಯುವಿಕೆ ನಿರಂತರವೂ ನಡೆಯಲೇಬೇಕಾದ ಕ್ರಿಯೆ. ಎಷ್ಟು ಕಲಿತರೂ ಅದರ ಎಷ್ಟೋ ಪಟ್ಟು ಕಲಿಯಲು ಉಳಿದಿರುತ್ತದೆ.
ReplyDeleteಕಲಿಯುವುದು ಜೀವನದಲ್ಲಿ ಎಷ್ಟಿದೆಯೋ ಗೊತ್ತಿಲ್ಲ..ಆದರೆ "ತಿಳಿಯದ ಸಂಗತಿಗಳು ಇನ್ನೂ ತುಂಬಾ ಇದೆ" ಅಂತ ಆಗಾಗ ಅನ್ನಿಸುತ್ತಿರುವುದು ಮಾತ್ರ ಸುಳ್ಳಲ್ಲ.
ReplyDelete