Wednesday, January 6, 2010

'undo'-ಮಹಿಮೆ :)

ಈ ಕಂಪ್ಯೂಟರ್ ನ 'undo ' ಆಪರೇಷನ್ ಎಷ್ಟು ತಲೆಗೆ ಹೊಕ್ಕಿದೆ ಅಂದ್ರೆ ಕೆಲವೊಮ್ಮೆ ಕೈ ತಪ್ಪಿ ಏನಾದರೂ ಆದರೆ 'undo ' option  ಇದ್ದಿದ್ದರೆ ಅಂತ ಅನ್ನಿಸತ್ತೆ.
ಜೀವನದಲ್ಲಿ ಕೂಡ ಹಾಗೇ ಅಲ್ವ?- ಕಾಲ ಚಕ್ರ ಮುಂದುವರಿತಾನೆ ಇರುತ್ತೆ....ಇಷ್ಟ ಇರಲಿ/ಇಲ್ಲದೆ ಇರಲಿ...ಹಿಂದೆ ತಿರುಗಿಸುವ ಹಾಗಿದ್ದರೆ ಅಂತ ಎಷ್ಟೋ ಬಾರಿ ಹಪಹಪಿಸಿದ್ದಿದೆ.
'ಮಾತು ಆಡಿದರೆ ಹೋಯ್ತು ....' ಅಂತ ಬಲ್ಲವರು ಹೇಳ್ತಾರೆ,,,ಅಯ್ಯೋ ವಾಪಸ್ಸು ತಗೊಳ್ಳುವ ಹಾಗಿದ್ದಿದರೆ...
ಅಚಾತುರ್ಯದಿಂದ ಘಟಿಸಿದ ಕಾರ್ಯಗಳ ಪುನಃ ಶೂನ್ಯ ಬಿಂದುವಿಗೆ ತರುವ ಹಾಗಿದ್ದಿದ್ದರೆ....
ಖುಷಿ ಕೊಡುವ ಕಾರ್ಯಗಳನ್ನ, ಮಾತುಗಳನ್ನ ಮೆಲುಕು ಹಾಕಿದಷ್ಟೂ ಮನಸ್ಸಿಗೆ ಹಿತ, ಅದರ ಪ್ರಭಾವವನ್ನ, ಪರಿಣಾಮವನ್ನ ಸುತ್ತಮುತ್ತಲಿದ್ದವರೂ ಅನುಭವಿಸುತ್ತಾರೆ, ಆ ಅನುಭೂತಿಯನ್ನ ವೈಪರೀತ್ಯಕ್ಕೆ ಕೊಂಡು ಹೋಗುವ ಸಾಮರ್ಥ್ಯವೂ ನಮ್ಮಲ್ಲಿದೆ- ಸಮಯಾ ಸಮಯದ ಪರಿವೆ ನಮ್ಮ ಮಾತು-ಕೃತಿಗಳ ಮೇಲಿದ್ದರೆ,,,,ಅಯ್ಯೋ 'undo ' option ಇದ್ದಿದ್ದರೆ ಅನ್ನುವ ಗೋಳು ತಪ್ಪಿಸಬಹುದೋ ಏನೋ !

7 comments:

 1. ಅಂದಿಗೆ ಅದು ಸರಿ..ಇಂದಿಗೆ ಇದು ಸರಿ..
  ಈ ಯೊಚನೆ ಇಟ್ಟುಕೊಂಡಲ್ಲಿ ,
  ಪಶ್ಚಾತ್ತಾಪದ ಪ್ರಶ್ನೆಯೇ ಬರದು,ಬದುಕಲಿ..
  ಯಾಕಂದ್ರೆ,ಯಾವಾಗಲೂ ನಮ್ಮ ತಿಳಿವಿನ,ಅರಿವಿನ ಮಟ್ಟದಲ್ಲಿ
  ನಾವು ಯೊಚಿಸಿತಾನೇ ಎಲ್ಲ ಕೆಲಸಗಳನ್ನು ಮಾಡಿದ್ದು?
  ಹಿಂದಿನದ್ದು ಸರಿಯಾಗಿಲ್ಲ..ಅನ್ನುವುದಕ್ಕಿಂತ,
  ಆ ಅರಿವು ಮೂಡಿದಮೇಲೆ ಸರಿ ಮಾಡ್ಕೊಂಡ್ರೆ ಆಯ್ತಲ್ಲ?

  ಜೀವನ ತುಂಬಾ ಸಿಂಪಲ್ಲುರೀ..ಆರಾಮವಾಗಿರೊಣ.
  ಸುಮ್ ಸುಮ್ನೇ ಯಾರೂ ಯೊಚಿಸಬಾರದು ತಾನೆ?
  ಆದರೆ ನಮಗೆ ಟೈಂಪಾಸ್ ಗೆ ಚಿಂತೆ ಬೇಕಿದ್ರೆ..ಮಾಡ್ಕೊಬಹುದು..

  ಓದಿ..ಚಿಂತೆ..ಯಾರಿಗೆ ಬೇಡ ಹೇಳಿ?
  ------------------------

  ReplyDelete
 2. ಅದರಲ್ಲೇ ಅಲ್ವ ಸಮಸ್ಯೆ ಇರೋದು, ಎಲ್ಲರೂ ಸರಿಯಿದ್ದರೆ, ಎಲ್ಲವೂ ಸರಿಯಾಗಿದ್ದರೆ, ಯಾಕೆ ಬೇಕು ಹೇಳಿ ನಮಗೆ ಈ ಪೋಲಿಸ್ , courtu ಎಲ್ಲ?

  ಮತ್ತೆ ಪ್ರತೀ ಸರ್ತಿಯೂ, ಅಂದಿಗೆ ಅದೇ ಸರಿ ಅಂತ ಅಂದುಕೊಳ್ಳೋದು ಸರಿಯಾ? ಮತ್ತೆ ನೀವೇ ಹೇಳಿದ ಹಾಗೆ ತಪ್ಪು ಪುನರಾವರ್ತನೆ ಆಗದ ಹಾಗೇ ನೋಡ್ಬೇಕಂದ್ರೆ, ಯೋಚನೆ, ವಿಮರ್ಶೆ ಬೇಕಲ್ವ? ಯೋಚನೆಯೇ ಚಿಂತೆ ಅಲ್ಲ -ಅಲ್ವ?

  ReplyDelete
 3. happy moments ನೆನಪಿಸಿದ್ರೆ ಇವಾಗಿನ್ ಬೇಜಾರು ಬದ್ಲು ಅದೇ nice moments ಇರ್ಲಿ ಅನ್ಸತ್ತೆ..ಯಾರಿಗಾದ್ರು ಕೋಪದಲ್ಲಿ ಏನಾದ್ರು ಹೇಳಿದ್ರೆ ಆಮೇಲೆ ಛೆ ಯಾಕ್ ಹಂಗೆ ಹೇಳ್ದೆ ಅಂದ್ಕೋತೀನಿ.. 'undo ' option ಇದ್ರೆ ಚೆನ್ನಾಗಿರೋದು....ಏನ್ ಮಾಡೋದು ಹಂಗೆ ಆಗಲ್ಲ :-(

  ReplyDelete
 4. ಅದಿಕ್ಕೆ ಅಲ್ವ ದೊಡ್ಡವರು ಹೇಳಿದ್ದು..."ಮಾತು ಆಡಿದರೆ ಹೋಯಿತು.." ಅಂತ

  ReplyDelete
 5. hmm...If we could say 'undo' in life, probably I would be undoing more than doing ;-) LoL

  Nice post :-)

  ReplyDelete
 6. Thanks Chitte :), had not seen your comment till today, sorry

  ReplyDelete