ಕೆಲ ದಿನಗಳ ಹಿಂದೆ, ಚೆನ್ನೈಯಲ್ಲಿ ಕಂಡ ದೃಶ್ಯ -
ಓರ್ವ ಭಿಕ್ಷುಕ, ಎಣ್ಣೆ ಕಾಣದ ಕೂದಲು, ಮಣ್ಣಿಗೂ ಅವನ ಮೈಗೂ ವ್ಯತ್ಯಾಸವೇ ಇಲ್ಲವೇನೋ ಎಂಬಷ್ಟು ಕೊಳಕಾದ ಅವನ ಮೈ-ಬಟ್ಟೆ, ಹುಲುಸಾಗಿ ಬೆಳೆದ ದಾಡಿ - ರಸ್ತೆ ಬದಿಯಲ್ಲಿ ಕುಳಿತಿದ್ದ. ಅವನ ಎದಿರು ಓರ್ವ ಸಾಮಾನ್ಯ ನಾಗರೀಕ; ಭಿಕ್ಷುಕನ ದನಿಗೆ ಪ್ರತಿಯಾಗಿ, ತಾನು ತಂದ ಆಹಾರವನ್ನ ಶುಚಿಯಾದ ತಟ್ಟೆಯಲ್ಲಿ ಹಾಕಿ, ತನ್ನ ಕೈಯಿಂದಲೇ ಆ ಭಿಕ್ಷುಕನಿಗೆ ಉಣ್ಣಿಸುತ್ತಿದ್ದಾನೆ!
ಓದಿದ್ದೆ ಇಂತಹ ದೈವೀ ವ್ಯಕ್ತಿಗಳ ಬಗ್ಗೆ, ಕಣ್ಣಾರೆ ಕಂಡದ್ದು ಇದೇ ಮೊದಲು.
ಜಗತ್ತಿನ ಅನ್ಯಾಯ, ಮೋಸಕ್ಕೆ ಎಷ್ಟೋ ಬಾರಿ ಮನಸ್ಸಿನಲ್ಲಿ ಅಸಹಾಯಕತೆ ಮೂಡುವುದಿದೆ, ಜನಗಳಲ್ಲಿ ಸತ್ಯ, ನ್ಯಾಯ-ನೀತಿ, ಎಲ್ಲಕ್ಕೂ ಮೊದಲಾಗಿ ಮಾನವೀಯತೆ ಸತ್ತೇ ಹೋಗಿದೆಯೇನೋ ಅನ್ನುವ ಭೀತಿ ಕಾಡುವುದಿದೆ....ನಾ ಕಂಡ ಆ ದೃಶ್ಯ ಮನಸ್ಸಿನಲ್ಲಿ ಆಶಾ ಕಿರಣವನ್ನ ಮೂಡಿಸಿತು; ಹಾಗೇ, ನನ್ನೊಳಗೆ - ನಾನೇನು ಮಾಡಿದ್ದೇನೆ, ನನ್ನ ಕೊಡುಗೆ ಸಮಾಜಕ್ಕೆ ಎಷ್ಟು -ಹೀಗೆ ಮಂಥನಕ್ಕೆ ಎಡೆ ಮಾಡಿ ಕೊಟ್ಟಿತು.
Let me change the things I can and let it start
ReplyDeletewith me.nice article.an eye opener for all.
ನಮಸ್ಕಾರ,
ReplyDeleteಮನುಜರೊಳಗಿನ ಮನುಷ್ಯ ಬಗೆಗಿನ ನಿಮ್ಮ ಅನುಭವ ನೈಜಾವಗಿದೆ.
ಎಷ್ಟೋ ಬಾರಿ, ನಾನು ಶೂಟಿಂಗ್ಗಳಿಗೆ ಹೋದಾಗ ಪರಿಚಯವೇ ಇರದ ವ್ಯಕ್ತಿಗಳು ಬಹಳ ಸಹಾಯ ಮಾಡಿದ್ದು ನೆನೆದಿದ್ದೇನೆ.
ಸರಳವಾಗಿ ಬರೆಯುತ್ತೀರಿ... ಹೀಗೆ ಬರೆಯುತ್ತಿರಿ.
- Badarinath Palavalli
Sr. Cameraman / Kasthuri Tv / Bengaluru
Please visit my Kannada Poetry blog:
www.badari-poems.blogspot.com
Your valuable comments are path finder for me
ಧನ್ಯವಾದಗಳು :), ನಿಮ್ಮ ಪ್ರೋತ್ಸಾಹಕ್ಕೆ, ಭಾಗವಹಿಸುವಿಕೆಗೆ...
ReplyDeleteಗೀತೆ...ನಿಮ್ಮ ಯೋಚನೆಗಳ ಲಹರಿ ಸರಿಯಾದ ದಿಕ್ಕಿಗೆ ಹರಿದಿದೆ....ಒಳ್ಲೆಯ ಲೇಖನ
ReplyDeleteನಿಮ್ಮ ಲೇಖನ ಚನ್ನಾಗಿದೆ.
ReplyDeleteಮನುಷ್ಯನೆಂದ ಮೇಲೆ ಎಲ್ಲರೂ ಒಂದೇ ಆದರೆ ಬದುಕುವ ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ಬೆಳೆಸಿಕೊಂಡಿದ್ದೇವೆ. ಅದೆ ನಮ್ಮ ತಪ್ಪುಗಳು
ಸ್ವ ಚಿ೦ತನೆಗೆ ನಿಮ್ಮ ಲೇಖನ ದಾರಿಮಾಡಿಕೊಡುತ್ತದೆ.ಅಭಿನ೦ದನೆಗಳು.
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು :)
ReplyDeletethumba samayadinda bareyuttiddaroo nimma blog kannige beelirale illa ishtaravarege... chennagide sanna sanna barahagaLu... college life bagegina lekhana thumba ishta aayithu...
ReplyDeleteಧನ್ಯವಾದಗಳು ಸುಧೇಶ್ ಅವರಿಗೆ. ಬ್ಲಾಗ್ ಗೆ ಸ್ವಾಗತ. ನೀವು ಕೂಡ ಬರೆಯಬಹುದು, ಬರೆಯಿರಿ :)
ReplyDeleteಕಾಲೇಜ್ ನ ಬರಹ ಸ್ವಾತಿಯವರದ್ದು.
ಕೆಲ ವರ್ಷಗಳ ಹಿ೦ದೆ ಹುಬ್ಬಳ್ಳಿ ಬಸ್ ಸ್ಟಾ೦ಡಿನಲ್ಲಿ ಕ೦ಡ ದೃಶ್ಯ..
ReplyDeleteಭಿಕ್ಷುಕಿಯೊಬ್ಬಳು ಮಗುವನ್ನು ಕ೦ಕುಳಲ್ಲಿ ಕೂರಿಸಿಕೊ೦ಡು ಭಿಕ್ಷೆ ಬೇಡುತ್ತಿದ್ದಳು. ಜೇಬು ತಡಕಾಡಿ ಚಿಲ್ಲರೆ ಇರದ ಕಾರಣ ನಾ ಕೈಲಿದ್ದ ಬಿಸ್ಕೇಟನ್ನು ಮಗುವಿಗೆ ನೀಡಿ ಮು೦ದೆ ನಡೆದೆ. ಸ್ವಲ್ಪ ಹೊತ್ತಿನಲ್ಲಿ ಮಗುವಿನ ಎತ್ತರದ ದನಿ ಕೇಳಿ ಅತ್ತ ನೋಡಿದ ದೃಶ್ಯ ಕರುಣಾಪೂರಿತವಾಗಿತ್ತು. ಭಿಕ್ಷುಕಿ ಬಿಸ್ಕೇಟ್ ಮಗುವಿನ ಕೈಯಿ೦ದ ಕಸಿದುಕೊ೦ಡು ತಾನೇ ತಿನ್ನುತಿದ್ದಳು. ಹಸಿವು ದಾರಿದ್ರ್ಯದ ಮು೦ದೆ ಕರುಣೆ, ಪ್ರೀತಿ ಇವೆಲ್ಲ ಮಾನವೀಯ ಮೌಲ್ಯಗಳು ಗೌಣವಾಗಿಬಿಡುತ್ತವೆಯೇ?
ಅನ೦ತ್
ಒಳ್ಳೆಯ ಅನುಭವ, ಮತ್ತೆ ಬರಲಿ ಹಲವು ! ಮೂಡಿಸಲಿ ನಲಿವು
ReplyDeleteನಮಸ್ಕಾರ. ನಾವು ನೋಡುವ ನೋಟದ ಮೇಲೆ ನಮ್ಮ ಭಾವ ಅವಲಂಬಿತ.ಕಣ್ಣಿನ ಎದುರಿಗೇ ಕಾಣುವ ಪ್ರಕೃತಿಯ ಸೊಬಗನ್ನು ನಾವು ಸರಿಯಾಗಿ ನೋಡುವುದಿಲ್ಲ. ಅದನ್ನೇ ಫೋಟೋದಲ್ಲಿ ನೋಡಿ ವಾವ್ ಅನ್ನುತ್ತೇವೆ. ಮುಂದುವರೆಸಿರಿ, 'ಗೀತೆ'ರವರೇ.
ReplyDeleteಎಷ್ಟೋ ಜನರ ಬದು ಹಾಗಿದೆ, ನಿಮಗೆ ಕಂಡಿರಿರುವುದು ಕೇವಲ ಚಿಕ್ಕ ಸ್ಯಾಂಪಲ್
ReplyDeleteGood one kanri...!! nanu nannadu antane bari yochustirtivi... namma sutalina prapanchada dukka kanodilvo... kandu jana kurudagirtivo gotilla...!
ReplyDeletehttp://spoorthi-manadamaatu.blogspot.com/
olleya lekhana, munduvareyali
ReplyDeleteGood one :)
ReplyDeletechandada baraha.......olleya janarinda , paripoorna samaajavu nirmaanavaagutte
ReplyDeletehttps://padmabhat.blogspot.com