Wednesday, November 2, 2016

ಪಂಜರದ ಗಿಳಿ

ಹೊಸ ಲಿಫ್ಟ್ ನ ಕೆಲಸ ಭರದಿಂದ ಸಾಗಿದೆ .....ಆಹಾ! ಮುದ್ದಾದ ಹಕ್ಕಿಗಳೆರಡು ಲಿಫ್ಟ್ ನ ಸರಳುಗಳ ಅಂತರವೇ ಅರಿಯದಂತೆ ಒಂದರಿಂದ ಇನ್ನೊಂದಕ್ಕೆ ಹಾರುತ್ತಿವೆ. ಹೋ ! ಎಷ್ಟು ಸುಲಭ- 'ಗಾಳಿಯಲ್ಲಿ ಒಂದಾಗಿ ತೇಲಲು ಬೇಕಿರುವುದು ಹೊರಗಿನ ಶಕ್ತಿಯಲ್ಲ , ತನ್ನ ಇರಿವಿನ ನೆರಳಲ್ಲಿ ಕಳೆದು ಹೋಗದೇ ಇರುವುದು ಅಷ್ಟೆ'. 

ಎಷ್ಟು ಭಾರ -ಎಂಬತ್ತ ನಾಲ್ಕು ಸಹಸ್ರ ವರ್ಷಗಳದ್ದೋ , ಈ ಜನ್ಮದಲ್ಲಿ ಗಳಿಸಿದ ಅಧಿಕಾರದ್ದೋ , ಹಣ -ಡಿಗ್ರಿ ಗಳದ್ದೋ , ಬಲ್ಲವರಾರು? ಈ ದೇಹದಿಂದ ಮಜಲುಗಳನ್ನು ಹತ್ತಲಾದೀತೇ? ತನುವಿನ ಭಾರದಿಂದ ಪಾತಾಳಕ್ಕಿಳಿದ ಮನುಜಾ ನಿನ್ನ ಎತ್ತಲು ಲಿಫ್ಟ್ ಅಲ್ಲದೆ ಬೇರೆ ಯಾರಿಂದ ಆದೀತು ?

 

Friday, January 23, 2015

ಸಮಾನತೆ - paradox ??

ದಿನಗೂಲಿ ಆಳುಗಳು ಪುಸ್ತಕದ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ಹೋಗುತ್ತಿದ್ದಾರೆ, ಮೂರು ದಿನದ ಪುಸ್ತಕ ಪ್ರದರ್ಶನ ಮುಗಿಯಿತಲ್ಲ ಹಾಗೆ..... ಎಲ್ಲದರಂತೆ ಇದು ಒಂದು ಸಾಮಾನು - ಹೊಟ್ಟೆ ತುಂಬಿಸುವ ಕಾಯಕಕ್ಕೆ ಪುಸ್ತಕ ಬೇರೆಯಲ್ಲ, cement ಬೇರೆಯಲ್ಲ .....

ಅಲ್ಲ, ಬಡತನ, ಅವಿದ್ಯೆ (ಇಲ್ಲಿ I mean not wisdom but education imparted in the present system) ಇಲ್ಲದೆ ಇದ್ದರೆ, ಈ ರೀತಿಯ ಕೆಲಸಗಳನ್ನ ಯಾರು ಮಾಡುತ್ತಾರೆ? ಮತ್ತೆ 'ಸಮಾನತೆ ' ಅಂತ ಒಂದು concept ಇದೆಯಲ್ಲ ????

ಗೀತೆ          

Friday, January 16, 2015

ಅನಾವರಣ

ತೇಲಿ ಬರುವ ಅಲೆಗಳ ನೋಡುತ್ತಾ ಆಗುವ ಆನಂದ, ಹಾರುತ್ತಿರುವ  ಪಕ್ಷಿ ಸಂಕುಲ  ನೀಡುವ ಕಚಗುಳಿ, ತಂಗಾಳಿ ನೀಡುವ ಮುದ, ಪೂರ್ಣ ಚಂದ್ರನ ವೀಕ್ಷಣೆಯಲ್ಲಿ ಮನದಲಿ ಅಂಕುರಿಸುವ ಪ್ರೇಮ - ನನಗನಿಸುವುದು, ಇದೆಲ್ಲದರಲ್ಲಿಯೂ COMMON ಆಗಿರುವ ಅಂಶ - 'ಮೌನ' !

ಹೀಗೆ UNCONDTIOTIONAL ಆಗಿ ಖುಷಿ ಪಡುವುದಕ್ಕೆ ಆ ತನ್ಮಯತೆ, ಎದುರಾಳಿಯ ಇರುವಿಕೆಯ ಪರಿವಿಯೇ ಇಲ್ಲದಿರುವುದು, - ಅಂತ STATE OF MIND ಇದ್ದರೆ, ನಮ್ಮ ಬರಿಯ ಇರುವಿಕೆ ಮಾತ್ರದಿಂದಲೇ ಅನ್ಯರಿಗೆ ಖುಷಿ ಕೊಡಬಹುದು. 
 

Sunday, April 27, 2014

Geosmin

ಹಲವು ದಿನಗಳ ಕಾತರ, ಕಾಯುವಿಕೆಗೆ ಕಿವಿಗೊಟ್ಟು ಮಳೆಯ ತುಂತುರು ಹನಿ ಬಂದದ್ದೇ  ತಡ ....' ಬಿಸಿಲ ಬೇಗೆಗೆ ಪರಿತಪಿಸುವ ಜೀವಕ್ಕೆ ಸಾಂತ್ವನ ನೀಡುತ್ತಾ .... ಮತ್ತದೇ ಪರಿಮಳ ಕಾದ ಭೂಮಿ ಮತ್ತು ಮಳೆಯ ಸಮ್ಮಿಲನದ ಪ್ರತೀಕ' . ಹೀಗೆ ನನ್ನ ಆಲೋಚನಾ ಸರಣಿ ಸಾಗಿರುವಾಗ ನನ್ನ ಇನಿಯನ ಪ್ರಶ್ನೆ ..... "ಈ ಪರಿಮಳಕ್ಕೆ ಕಾರಣ ಏನು?"... ಸರಿಯಾದ ಉತ್ತರವನ್ನೇ ಕೊಡಬೇಕೆಂಬ ಹಂಬಲದಲ್ಲಿ ತುಸು ಆಲೋಚಿಸಿ ಹೇಳಿದೆ -"ಇರಬಹುದು ಯಾವುದೊ chemical release ಆಗಿರುತ್ತೆ "...can you believe?- ಸರಿಯಾದ ಉತ್ತರ ... ಹಾಗೆ ಮತ್ತೆ ನನಗೆ ಸಿಕ್ಕಿದ ಮಾಹಿತಿ ...'geosmin is a chemical released when certain microorganisms die' ಅಂತ ....

ಈ ಒಂದು ಪರಿಮಳ ಅದೆಷ್ಟೋ ಕವಿಗಳ ಕವಿತೆಗೆ, ಪ್ರೇಮಿಗಳಿಗೆ ಸ್ಫೂರ್ತಿ ! ಎತ್ತಣ ಕೋಗಿಲೆ ಎತ್ತಣ ಮಾಮರ ....

 ... ನನ್ನ ಪುನಃ ಪ್ರವೇಶ ಬ್ಲಾಗ್ ಗೆ ಆದದ್ದು geosmin ನಿಂದಲೇ , ಅಂತರಂಗದ ಕದ ತಟ್ಟಿದ ಇನಿಯನಿಂದಲೇ,  ... ಹೀಗೊಂದು ಆಲೋಚನಾ ಸರಣಿಯ ಹಂಚಿಕೊಳ್ಳುವ ಬಯಕೆಯಿಂದ ಬರೆದೆ....

ಪ್ರೀತಿಯಿಂದ
ಗೀತೆ 

Thursday, February 28, 2013

ಚೇತನ - ಅನಿಕೇತನ

ಎಲ್ಲರಿಗೂ ನಮಸ್ಕಾರ

ವರುಷಗಳೇ ಸಂದವು ಬರೆಯದೆ -ಬರೆಯಲಿಲ್ಲ ಅಂತ  ಹೇಳಲೆ?ಅಲ್ಲ ಹಂಚಿಕೊಳ್ಳುವ ಮನಸ್ಸಿರಲಿಲ್ಲ ಅನ್ನಲೇ ?,ಮನದ ನೂರು ಕದಲಿಕೆಗಳ ಹಂಚಿಕೊಳ್ಳುವುದಕ್ಕೂ ಒಂದು ರೀತಿಯ ಆಸಕ್ತಿ ಬೇಕು- ಹಂಚಿಕೊಂಡಾಗ ಬರುವ ಹತ್ತು ಹಲವು ದೃಷ್ಟಿಕೋನಗಳ ಆಸ್ವಾದಿಸುವ ಉತ್ಸಾಹ ಬೇಕು - ಇವ್ಯಾವುದೂ ಇರಲಿಲ್ಲ ನನ್ನಲ್ಲಿ.

ಆಹಾ !ಎಷ್ಟು ಚೆಂದ ಅನ್ನುತ್ತಿರುವಾಗಲೇ ಓಹೋಹೋ ಬದುಕು ಅಂದರೆ ಬರೇ ದುಃಖ - ಹೀಗೆ ಇನ್ನು ಯಾವಾಗ ಬದುಕಿನ ಚುಕ್ಕಾಣಿ ಹಿಡಿಯುತ್ತೇನೋ ಅನ್ನುವ ಆಸೆಯೂ ಬರದಿರುವಂತ ಪರಿಸ್ಥಿತಿ...

ಈಗ ಒಂದು ರೀತಿಯ ಸಮ ಚಿತ್ತ, ಹಾಗಾಗಿ ಪುನಃ ಜೀವನ ಪುಟಗಳನ್ನ ತಿರುವಬಹುದು, ಸಹೃದಯರೊಂದಿಗೆ ಪಯಣಿಸಬಹುದು ಎಂಬ ಹೊಸ ಹುರುಪು.

ಗೀತೆ   

Monday, May 10, 2010

ಕಂಡದ್ದು - ಕಾಣದ್ದು !

ಕೆಲ ದಿನಗಳ ಹಿಂದೆ, ಚೆನ್ನೈಯಲ್ಲಿ ಕಂಡ ದೃಶ್ಯ -
ಓರ್ವ ಭಿಕ್ಷುಕ, ಎಣ್ಣೆ ಕಾಣದ ಕೂದಲು, ಮಣ್ಣಿಗೂ ಅವನ ಮೈಗೂ ವ್ಯತ್ಯಾಸವೇ ಇಲ್ಲವೇನೋ ಎಂಬಷ್ಟು ಕೊಳಕಾದ ಅವನ ಮೈ-ಬಟ್ಟೆ, ಹುಲುಸಾಗಿ ಬೆಳೆದ ದಾಡಿ - ರಸ್ತೆ ಬದಿಯಲ್ಲಿ ಕುಳಿತಿದ್ದ. ಅವನ ಎದಿರು ಓರ್ವ ಸಾಮಾನ್ಯ ನಾಗರೀಕ; ಭಿಕ್ಷುಕನ ದನಿಗೆ ಪ್ರತಿಯಾಗಿ, ತಾನು ತಂದ ಆಹಾರವನ್ನ ಶುಚಿಯಾದ ತಟ್ಟೆಯಲ್ಲಿ ಹಾಕಿ, ತನ್ನ ಕೈಯಿಂದಲೇ ಆ ಭಿಕ್ಷುಕನಿಗೆ ಉಣ್ಣಿಸುತ್ತಿದ್ದಾನೆ!
ಓದಿದ್ದೆ ಇಂತಹ ದೈವೀ ವ್ಯಕ್ತಿಗಳ ಬಗ್ಗೆ, ಕಣ್ಣಾರೆ ಕಂಡದ್ದು ಇದೇ ಮೊದಲು.
ಜಗತ್ತಿನ ಅನ್ಯಾಯ, ಮೋಸಕ್ಕೆ ಎಷ್ಟೋ ಬಾರಿ ಮನಸ್ಸಿನಲ್ಲಿ ಅಸಹಾಯಕತೆ ಮೂಡುವುದಿದೆ, ಜನಗಳಲ್ಲಿ ಸತ್ಯ, ನ್ಯಾಯ-ನೀತಿ, ಎಲ್ಲಕ್ಕೂ ಮೊದಲಾಗಿ ಮಾನವೀಯತೆ ಸತ್ತೇ ಹೋಗಿದೆಯೇನೋ ಅನ್ನುವ ಭೀತಿ ಕಾಡುವುದಿದೆ....ನಾ ಕಂಡ ಆ ದೃಶ್ಯ ಮನಸ್ಸಿನಲ್ಲಿ ಆಶಾ ಕಿರಣವನ್ನ ಮೂಡಿಸಿತು; ಹಾಗೇ, ನನ್ನೊಳಗೆ - ನಾನೇನು ಮಾಡಿದ್ದೇನೆ, ನನ್ನ ಕೊಡುಗೆ ಸಮಾಜಕ್ಕೆ ಎಷ್ಟು -ಹೀಗೆ ಮಂಥನಕ್ಕೆ ಎಡೆ ಮಾಡಿ ಕೊಟ್ಟಿತು.

Tuesday, May 4, 2010

Someone asked me.. wanting to know me better, as to what do I like.
Though I find that question to be a boring one sometimes,.. this one inspired me to answer today!
And I began to write..
and wrote,

What do I like?

I like rains.. clouds..
also the warm sun most of the times,..
I love silence,.. and sitting under the tree watching the river flow by,

good driving, no honking people,
I like driving long journeys,..
.. the koyal's cohoo..anytime! especially when it sings to itself even in the buzzle of traffic!
I like fresh flowers,.. neat houses, .. simple furniture,
good fresh vegetarian food,
hmm... i love smiles and .. men who talk less ;)
.. I love to read , my morning chai
coffee ..only those evenings when i crave for it,..
I like committed people, sensitivity,..
.. people with compassion,
watching the waves of the sea,..
the expression on buddha's face,..
and in Christ's,
.. love Krshna's flute and pranks,
and Radha's love

And I could not stop... did not want to edit

sowmya

Saturday, May 1, 2010

ಅಂತೂ college life ಇನ್ನು ಕೆಲವೇ ದಿನಗಳು ಅಷ್ಟೇ.. farewell ದಿನದ ನಂತರ ಈ levelಗೆ ಬೇಸರ ಆಗತ್ತೆ ಅಂತ ಅಂದ್ಕೊಂಡೇ ಇರ್ಲಿಲ್ಲ.. classಗೆ late entry ಕೊಟ್ಟಿದ್ದು.. ಚೆನ್ನಾಗ್ ಪಾಠ ಮಾಡೋದಿದ್ರೆ ಕೇಳೋದು, ಇಲ್ದೆ ಇದ್ರೆ ತೂಕಡ್ಸೋದು , ಚಿತ್ತಾರ ಬಿಡ್ಸೋದು , ಕತೆ ಪುಸ್ತಕ ಓದೋದು.. ಚೆನ್ನಾಗಿ seminars present ಮಾಡಿದ್ದು.. ಮಧ್ಯಾಹ್ನ ಗೆಳತಿಯರೆಲ್ರು ಒಟ್ಟಿಗೆ ಕೂತು lunch box ಹಂಚಿದ್ದು.. ಲ್ಯಾಬ್ ಲಿ ಮನ್ಸಾದಾಗ ಭಯಂಕರ ಉತ್ಸಾಹದ ಕೆಲ್ಸ, ಇಲ್ದೆ ಇದ್ರೆ ಬೇಕಾ ಬಿಟ್ಟಿ ಕೆಲ್ಸ.. ಹಂಗೆ ನಡು ನಡುವೆ ನಮ್ಮ college ಪಕ್ಕದ್ canteenಗೆ ಹೋಗಿ ಮುಕ್ಕಿದ್ದು, ಇಲ್ಲ aunty shopಗೆ ಹೋಗಿ slice ಇಲ್ಲ ಎಳನೀರು ಕುಡ್ದಿದ್ದು.. ಸಂಜೆ ಹೊತ್ತು ಕಲ್ಲು benchಲಿ ಕೂತು ಹರಟೆ ಹೊಡಿದು, ನಮ್ದೇ ಗಲಾಟೆಲಿ ವಾಪಸ್ ಬಂದಿದ್ದು.. full dress up ಆಗ್ಕೊಂಡು ಹೋದಾಗ ಸಿಕ್ಕಿದ compliments.. campusಲಿ ನಡಿಯೋ ಎಲ್ಲ festsಲಿ ಅರಚಿದ್ದು.. ಎರಡು ವರ್ಷ ಹಾಡೋ ಸ್ಪರ್ಧೆಗಳಿಗೆ ಮಾಡಿದ ತಯಾರಿ.. ಪೂರ್ತಿ semesterದು records ಒಂದೇ ವಾರದಲ್ಲಿ ಬರಿಯೋ ತಾಕತ್ತು.. exams ಹತ್ರ ಬಂದಂಗೆ ಮಾಡಿದ notesದು ಅಟ್ಟಿಗಟ್ಲೆ xerox.. ಪ್ರತೀ ಸಲ examಲಿ ಪೂರ್ತಿ ಬರ್ದೇ ಆಗಿಲ್ಲ ಅಂತ ಅಳು ಮುಖ ಮಾಡ್ಕೊಂಡು ಬಂದಿದ್ದು.. ಗೆಳತಿಯರಿಗೆ ಪ್ರೀತಿಯೊಂದ ಕೊಟ್ಟ ಪುಟ್ಟ gifts.. ಎಲ್ಲ ಸಂತೋಷದ ಕ್ಷಣಗಳು, ಕಾಲ್ ಎಳ್ದಿದ್ದು, ತಮಾಷೆ ಮಾಡಿರೋದು, ಸಿಟ್ಟು ಜಗಳ ಸಮಾಧಾನ ಮಾಡ್ಕೊಂಡಿದ್ದು, ಅತ್ತಿರೋದು.. ನಿಜಕ್ಕೂ universityಲಿ ಕಳೆದ ಈ ಎರಡು ವರ್ಷ ಅದ್ರಲ್ಲೂ, ಕೊನೆ ಎರಡು semesters have been special 2 me..

Friday, April 2, 2010

ಅಮ್ಮಾ ನಿನ್ನ ಎದೆಯಾಳದಲ್ಲಿ....

ಮೊನ್ನೆ ಮನೆಗೆ ಬಂದ ನೆಂಟರ ಹತ್ರ ಮಕ್ಕಳನ್ನ ಹೇಗ್ ನೋಡ್ಕೋಬೇಕು ಅಂತ ಅಮ್ಮ ಮಾತಾಡ್ತಿದ್ಲು .. 'ಮಕ್ಕಳ ಈಗ friends ಹಂಗೆ ನೋಡಿಯೋಳ್ಳಕ್ಕು , ಅವಕ್ಕೆ ನಾವು ಕೊಡಕ್ಕಾದದು ಪ್ರೀತಿ ಮತ್ತೆ ಸಮಯ ಅಷ್ಟೇ'.. ಹೀಗೆ ಅಮ್ಮನ ಮಾತು ಮುಂದುವರಿತಾ ಇತ್ತು.. ಅಮ್ಮ ನಮ್ಮನ್ನ ಅದೆಷ್ಟು ಪ್ರೀತಿಯಿಂದ ನೋಡ್ಕೊತಾಳೆ.. ಅವಳದ್ದು 'unconditional love '.. ಮಕ್ಕಳನ್ನ ನೋಡ್ಕೊಳ್ಳೋದು ಅವಳ ಕರ್ತವ್ಯ ಅಂತ simple ಆಗಿ ಹೇಳ್ಬೋದು.. ಆದ್ರೆ ನಮ್ಮ raisingಗೆ ಅವ್ಳು ಮಾಡೋ ಅಷ್ಟು compromises , sacrifices , wishes ನಮಿಗೋಸ್ಕರ ಬೇರೆ ಯಾರೂ ಮಾಡಲ್ಲ ಅನ್ಸತ್ತೆ.. ಒಂದ್ ಹುಡುಗಿ ಬೆಳೀತಾ ಇದ್ದ ಹಂಗೆ ಒಂದೊಂದೇ ಮೌಲ್ಯನ ಅಳವಡಿಸ್ತಾಳೆ ಅಂದ್ರೆ ಅದಿಕ್ಕೆ ಅಮ್ಮ ಕಾರಣ.. ನಮ್ಮ positive thinking , ಮಾತುಕತೆ ಶೈಲಿ, ನಿರ್ಣಯ ತಗೊಳೋ ಸಾಮರ್ಥ್ಯ, ಕೆಲ್ಸ ಮಾಡೋ ರೀತಿ, outlook on life.... ಹೀಗೆ ದಿನನಿತ್ಯದ ಅದೆಷ್ಟೋ ವಿಚಾರಗಳಲ್ಲಿ ನಾವು effecient ಇದೀವಿ ಅಂದ್ರೆ ಹುಟ್ಟ್ದಾಗಿಂದ ಅಮ್ಮ ನಮ್ಮನ್ನ ಬೆಳ್ಸಿದ್ ರೀತಿ, ಅವ್ಳು ಮನೇಲಿ maintain ಮಾಡಿರೋ healthy environmentಏ ಕಾರಣ.... For all you've done, thank you, ಅಮ್ಮ. For all that you are, I love you....

Sunday, February 21, 2010

ಹೀಗೊಂದು ಜಿಜ್ಞಾಸೆ :)

ಪ್ರತಿ ದಿನವೂ ನನಗೆ ಅನಿಸುವುದಿದೆ- "ಈ ಹೊತ್ತಿಗೆ ನಾನು ಪ್ರಬುದ್ಧಳಿದ್ದೇನೆ, ನನ್ನ ವಿಚಾರಗಳು, ನಂಬಿಕೆಗಳು, ಸರಿಯಾಗಿವೆ, ಕೆಲ ಸಮಯದ ಹಿಂದಿನ ನನ್ನ ವರ್ತನೆಗಳು-ಮಾತುಗಳು ನನಗೆ ನಗು ತರಿಸುತ್ತವೆ, ಅಯ್ಯೋ ಹೀಗೆನ್ದವಳು ನಾನೇನ!"
ಅಲ್ಲೇ ನೋಡಿ ಇರೋದು ಜೀವನದ ಸ್ವಾರಸ್ಯ, ಈ ಚಿಂತನೆ ನನಗೆ ಒಂದು ಸತ್ಯದ ಅರಿವನ್ನ ಮೂಡಿಸುತ್ತದೆ-ಈ ದೇಹ ಇರುವಲ್ಲಿಯವರೆಗೂ ಅನುದಿನ, ಅನುಕ್ಷಣ ಮಾನಸಿಕವಾಗಿ ಕಲಿಯುತ್ತಲೇ ಇರುತ್ತೇನೆ ಅಂತ. " I have arrived" ಅಂತ ಅನ್ನುವ ಹೇಳಿಕೆಯೇ ಬಾಲಿಶ ಅಂತನಿಸುತ್ತದೆ.
ನಿಮಗೂ ಹೀಗೆ ಅನ್ನಿಸುತ್ತ? ಕಲಿಯುವಿಕೆ ನಿರಂತರ ಅನ್ನುವ ಭಾವನೆ ನಿಮ್ಮ ಅನುಭವಕ್ಕೂ ಬಂದಿದೆಯ? ಅಥವಾ ನನ್ನ ಆಲೋಚನಾ ಲಹರಿಯೇ ತಪ್ಪಾ? 

Saturday, January 23, 2010

the test of need of conveying..

A story that I wish to share..

In ancient Greece (469 - 399 BC), Socrates was widely lauded for his wisdom.


One day the great philosopher came upon an acquaintance that ran up to him excitedly and said, "Socrates, do you know what I just heard about one of your students called Plato?"

"Wait a moment," Socrates replied. "Before you tell
me I'd like you to
pass a little test. It's called the Triple Filter Test".


"Triple filter?"


"That's right," Socrates continued. "Before you
talk to me about my student
let's take a moment to filter what you're going to
say.


The first Filter is Truth. Have you made absolutely
sure that what you are about to tell me is true?"


"No," the man said, "actually I just heard about it
and..."


"All right," said Socrates. "So you don't really
know if it's true or not.


Now let's try the second filter, the Filter of
Goodness. Is what you are
about to tell me about my student something good?"
"No, on the contrary..."
"So," Socrates continued, "you want to tell me
something bad about him,
even though you're not certain it's true?"
The man shrugged, a little embarrassed.

Socrates continued. "You may still pass the test
though, because there is a
third filter - the Filter of usefulness. Is what you
want to tell me about my student going to be useful to me?"


"No, not really..."
"Well," concluded Socrates, "if what you want to
tell me is neither True nor Good, nor even Useful, why tell it to me
at all?"
The man was defeated and ashamed.


This is the reason Socrates was a great philosopher
and held in such high esteem.

Wednesday, January 6, 2010

'undo'-ಮಹಿಮೆ :)

ಈ ಕಂಪ್ಯೂಟರ್ ನ 'undo ' ಆಪರೇಷನ್ ಎಷ್ಟು ತಲೆಗೆ ಹೊಕ್ಕಿದೆ ಅಂದ್ರೆ ಕೆಲವೊಮ್ಮೆ ಕೈ ತಪ್ಪಿ ಏನಾದರೂ ಆದರೆ 'undo ' option  ಇದ್ದಿದ್ದರೆ ಅಂತ ಅನ್ನಿಸತ್ತೆ.
ಜೀವನದಲ್ಲಿ ಕೂಡ ಹಾಗೇ ಅಲ್ವ?- ಕಾಲ ಚಕ್ರ ಮುಂದುವರಿತಾನೆ ಇರುತ್ತೆ....ಇಷ್ಟ ಇರಲಿ/ಇಲ್ಲದೆ ಇರಲಿ...ಹಿಂದೆ ತಿರುಗಿಸುವ ಹಾಗಿದ್ದರೆ ಅಂತ ಎಷ್ಟೋ ಬಾರಿ ಹಪಹಪಿಸಿದ್ದಿದೆ.
'ಮಾತು ಆಡಿದರೆ ಹೋಯ್ತು ....' ಅಂತ ಬಲ್ಲವರು ಹೇಳ್ತಾರೆ,,,ಅಯ್ಯೋ ವಾಪಸ್ಸು ತಗೊಳ್ಳುವ ಹಾಗಿದ್ದಿದರೆ...
ಅಚಾತುರ್ಯದಿಂದ ಘಟಿಸಿದ ಕಾರ್ಯಗಳ ಪುನಃ ಶೂನ್ಯ ಬಿಂದುವಿಗೆ ತರುವ ಹಾಗಿದ್ದಿದ್ದರೆ....
ಖುಷಿ ಕೊಡುವ ಕಾರ್ಯಗಳನ್ನ, ಮಾತುಗಳನ್ನ ಮೆಲುಕು ಹಾಕಿದಷ್ಟೂ ಮನಸ್ಸಿಗೆ ಹಿತ, ಅದರ ಪ್ರಭಾವವನ್ನ, ಪರಿಣಾಮವನ್ನ ಸುತ್ತಮುತ್ತಲಿದ್ದವರೂ ಅನುಭವಿಸುತ್ತಾರೆ, ಆ ಅನುಭೂತಿಯನ್ನ ವೈಪರೀತ್ಯಕ್ಕೆ ಕೊಂಡು ಹೋಗುವ ಸಾಮರ್ಥ್ಯವೂ ನಮ್ಮಲ್ಲಿದೆ- ಸಮಯಾ ಸಮಯದ ಪರಿವೆ ನಮ್ಮ ಮಾತು-ಕೃತಿಗಳ ಮೇಲಿದ್ದರೆ,,,,ಅಯ್ಯೋ 'undo ' option ಇದ್ದಿದ್ದರೆ ಅನ್ನುವ ಗೋಳು ತಪ್ಪಿಸಬಹುದೋ ಏನೋ !

Tuesday, December 29, 2009

ಯಾಕೆ ಹೀಗೆ !

ವಾರ್ತೆಯಲ್ಲಿ ಕೇಳಿದೆ-ವಿಷ್ಣುವರ್ಧನ ಇನ್ನಿಲ್ಲ ಅಂತ-ಮುಂದುವರಿದು ಶಾಲೆಗೆ ರಜೆ ಅಂತಲೂ ಕೇಳಿದೆ!, ಹಾಗೆ ನಮ್ಮ ಅಶ್ವಥರೂ ಇನ್ನಿಲ್ಲ...
ರಜೆ ಘೋಷಿಸಿ ಏನು ತೋರಿಸಿದಂತಾಯಿತು? ಏನೋ ನನ್ನ ಮನಸ್ಸಿಗೆ ಇದು ಸರಿ ಕಾಣುವುದಿಲ್ಲ, ಎಲ್ಲದರಲ್ಲೂ ಸ್ಪರ್ಧೆಯೇ ಹೊರತು ಬೇರೇನೂ ಇಲ್ಲ...ನಮ್ಮ ಪ್ರತಿಕ್ರಿಯೆಗಳು ಯಾವ ರೂಪ ಪಡಕೊಂಡಿದೆ ಅಂತ ಯೋಚಿಸಿದರೆ ಖೇದವಾಗುತ್ತದೆ...
ನಿಮಗೇನು ಅನಿಸುತ್ತದೆ-ನನ್ನ ಯೋಚನಾ ಲಹರಿ? 

Thursday, December 24, 2009

ಹೊಸ ವರುಷ :)

ಭೌತಿಕವಾಗಿ ಎಲ್ಲ ದಿನಗಳೂ ಬಹುತೇಕ ಒಂದೇ ಆಗಿರುತ್ತವೆ. ಆಯಾ ದಿನದ ಮಹತ್ವ, ಭಾವನಾತ್ಮಕವಾಗಿ ನಿರ್ಧರಿಸಲ್ಪಡುತ್ತದೆ. ಮಾನವನ ಮನಸ್ಸಿಗೆ ಇರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ.'ಹುಟ್ಟಿದ ದಿನ', ಸ್ವಾತಂತ್ರದ ದಿನ', ಹುತಾತ್ಮರ ದಿನ', ...ಹೀಗೆ. ನಾವೇ ನಿರ್ಮಿಸಿದಂತಹ ಈ ದಿನಗಳಿಗೆ ನಮ್ಮ ಮನಸ್ಸು ಎಷ್ಟರ ಮಟ್ಟಿಗೆ ಹೊಂದಿಕೊಂಡಿದೆ ಅಂತ ಯೋಚಿಸಿದರೆ ಬಹಳ ಅಚ್ಚರಿ ಎನಿಸುತ್ತದೆ.
'ಹೊಸ ವರುಷ'- ಹತ್ತಿರ ಬರುತ್ತಾ ಇದೆ, ಹೊಸ ಕನಸುಗಳು, ಯೋಜನೆಗಳು, ಉತ್ಸಾಹ,...ಎಲ್ಲರಲ್ಲಿ...ದಶಂಬರದಲ್ಲೂ ಮಾಡಬಹುದಾದ ಕಾರ್ಯಗಳನ್ನ ಜನವರಿ ಒಂದಕ್ಕೆ ಮಾಡುವುದರಲ್ಲಿ ಏನೋ ಖುಷಿ! ಕೆಲವೊಮ್ಮೆ ಅನಿಸುತ್ತದೆ-ಇದು ಒಂದು ರೀತಿಯ ಪಲಾಯನ ವಾದ ಅಂತ, ಮತ್ತೆ ಯೋಚಿಸುತ್ತೇನೆ-'ಅಯ್ಯೋ ಗೀತ ಅಷ್ಟು ಯೋಚಿಸಬೇಡ ಅಂತ'....
"ಏನೇ ಆಗಲಿ, ಹೊಸ ವರುಷ ಎಲ್ಲರಿಗೂ ಒಳಿತನ್ನೇ ಉಂಟುಮಾಡಲಿ, ಎಲ್ಲೆಲ್ಲಿಯೂ ಶಾಂತಿ-ನೆಮ್ಮದಿ ಇರಲಿ " 

Sunday, December 13, 2009

ನಿವೇದನೆ

ಸಾಕುಪ್ರಾಣಿ-ಪಕ್ಷಿಗಳ ಅಳಲು ಹೀಗಿರಬಹುದೋ ಏನೋ ಅಂತ ಅನಿಸಿದಾಗ ಬರೆದದ್ದು -

"ಬಂಧಿಸಿಡದಿರಿ ನನ್ನ
ಭಾವಚಿತ್ರದ ಚೌಕಟ್ಟಿನೊಳಗೆ

ಸುಂದರವಾದ ಕಲಾಕೃತಿ ಆಗಬೇಕೆಂಬ
ಹಂಬಲ ನನಗಿಲ್ಲ
ಜನಮನ ಸೂರೆಗೊಳ್ಳುವ ಅಂದ
ಬೇಕೆಂಬ ಆಸೆ ನನಗಿಲ್ಲ

ಮತ್ತೇನು ಬೇಡ ನನಗೆ
ಕೊಡುವಿರಾದರೆ ಬಿಟ್ಟುಕೊಡಿ
ಸ್ವಚ್ಚಂದ ಆಗಸದಡಿ ಮನಸೋ ಇಚ್ಚೆ
ಪ್ರಕೃತಿಯ ಅನುಭಸುವ ಅನುಭೂತಿಯ"

Friday, November 27, 2009

ಧರ್ಮದ ಸರಳ ವ್ಯಾಖ್ಯಾನ :)

ನಗುವು ಸಹಜದ ಧರ್ಮ; ನಗಿಸುವುದು ಪರ ಧರ್ಮ|
ನಗುವ ಕೇಳುತ ನಗುವುದತಿಶಯದ ಧರ್ಮ||
ನಗುವು ನಗಿಸುವ ನಗಿಸಿ ನಗುತ ಬಾಳುವ ವರವ|
ಮಿಗೆ ನೀನು ಬೇಡಿಕೊಳೋ - ಮಂಕುತಿಮ್ಮ||
-ಡಿವಿಜಿ

Monday, November 16, 2009

ತಾಯೇ ಇಳಿದು ಬಾ..

ಇತ್ತೀಚಿಗೆ ನನ್ನನ್ನು ಬಾಧಿಸುತ್ತಿರುವ ಸಂಗತಿ - ಪ್ರಕ್ಷುಬ್ಧ ಸಾಮಾಜಿಕ ಸಂಬಂಧಗಳು.
ಮನುಷ್ಯ ಮನುಷ್ಯರ ನಡುವೆ ಬತ್ತಿಹೋಗುತ್ತಿರುವ ವಿಶ್ವಾಸ, ಎಲ್ಲೆಲ್ಲೂ ಕಡಿಮೆಯಾಗುತ್ತಿರುವ 'ನಂಬಿಕೆ', ಹೆಚ್ಚು-ಕಡಿಮೆ ಎಂದು ಅಳೆಯುವ ಪೈಪೋಟಿ, ಅವನನ್ನು ಕೆಳಗೆಳೆದರೆ ಮಾತ್ರ ನಾನು ಮೇಲೇರಬಹುದೆಂಬ ಲಫಂಗತನ,.. ಮೋಸ, ದ್ವೇಷ, ಅಪನಂಬಿಕೆ.. ಇವೆಲ್ಲವನ್ನೂ ಮೀರಿ 'ಏನಾದರೆ ನನಗೇನು' ಎಂಬ indifference. ಒಬ್ಬರಿಗೊಬ್ಬರು ಸಹಕರಿಸಿ, ಪ್ರೀತಿಯಿಂದ, ಸಹನೆಯಿಂದ, ಹಿಂಸೆಮಾಡದೆ ಬದುಕುವಂತೆ ಆಗುವ ನಿಟ್ಟಿನಲ್ಲಿ ನಾನು ಏನೇ ಮಾಡಲು ಸಾಧ್ಯವಿದ್ದರೂ ಮಾಡಬೇಕೆನಿಸುತ್ತೆ... ಏನು ಮಾಡಲಿ?

Monday, November 9, 2009

ಹೀಗೆ...

ಇವತ್ತು ತಲೆ ಬಾಚುವಾಗ ಮನಸ್ಸಿಗೆ ಹೊಳೆದದ್ದು :) - 'ಕೂದಲು ಗಂಟು ಗಂಟಾಗಿತ್ತು, ಯಾವತ್ತು ಉಪಯೋಗಿಸುವ ಬಾಚಣಿಗೆ ಸರಿಯಾಗಲಿಲ್ಲ,ಹಣಿಗೆಯ ಹಲ್ಲುಗಳ ಮಧ್ಯೆ ಹೆಚ್ಚಿನ ಜಾಗ ಇರಬೇಕು, ಆಗ ಗಂಟು ನೋವಾಗದಂತೆ ಬಿಡಿಸಬಹುದು ಅಂತ ಹಣಿಗೆ ಬದಲಾಯಿಸಿದೆ'- ಜೀವನದಲ್ಲೂ ಅಷ್ಟೆ, ಸಮಸ್ಯೆಗಳ ಅಳಕ್ಕೆ ತಕ್ಕಂತೆ, ಪರಿಹಾರ ವಿಧಾನವೂ ಬದಲಾಗುತ್ತದೆ,....ಆದರೆ ಯಾವ ರೀತಿಯ ಪರಿಹಾರ ಬೇಕು ಅನ್ನುವುದರ ಸ್ಪಷ್ಟತೆಯೂ ಅಗತ್ಯ....ಸಿಕ್ಕಾದ ಕೂದಲನ್ನು ಕತ್ತರಿಸಿದರೂ ಸಿಕ್ಕು ಬಿಡುತ್ತದೆ, ಗಂಟಿಲ್ಲದೆ, ಹಾಗೆಯೇ ಪಲಾಯನ ಮಾಡದೇ ಸಮಸ್ಯಗಳ ಸುಳಿಯಿಂದ ಹೊರ ಬರಲಿಕ್ಕೆ ಅದಕ್ಕೆ ತಕ್ಕುದಾದ ಪರಿಹಾರ ಹುಡುಕುತ್ತಾ ಮುಂದೆ ಸಾಗುವುದೇ ಸುಖೀ ಜೀವನದ ರಹಸ್ಯ :)

Thursday, October 29, 2009

"ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ "
-ಡಿ.ವಿ.ಜಿ

ಹೊಂದಾಣಿಕೆ ಮತ್ತು ಲೀನವಾಗುವುದು ಅನ್ನೋದನ್ನ ಕವಿ ಒಂದೇ ಪ್ರಕ್ರಿಯೆ ಅಂತ ಬರೀತಾರೆ. ಇಲ್ಲಿ ಜೀವನದ ಸಿಹಿ ಕಹಿಗೆ ಹೇಗೆ ಸ್ಪಂದಿಸಬೇಕು ಅನ್ನೋದನ್ನ ಹೇಳ್ತಾ ಇರುವ ಹಾಗೆಯೇ 'ತಾನು' ಅನ್ನುವ ಚೌಕಟ್ಟಿನ ಹೊರಗೆ ಬರುವ ಪ್ರಕ್ರಿಯೆಗೆ ನಾಂದಿ ಹಾಕುತ್ತಾರೆ.

Friday, October 16, 2009

Empathy!

ನಾನು ಒಮ್ಮೆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಾಗ ನಡೆದ ಘಟನೆ- ಒಂದು ನಾಯಿ ಮರಿ, ರಸ್ತೆಯನ್ನ ದಾಟುವುದಕ್ಕೆ ಪ್ರಯತ್ನಿಸ್ತಾ ಇತ್ತು, ಆದರೆ ಅದಕ್ಕೆ ಕಾಲು ಊನ, ಹಾಗಾಗಿ ಬಹಳವೇ ಕಷ್ಟಪಟ್ಟು ನಡೆಯಲು ಪ್ರಯತ್ನಿಸುತ್ತಾ ಇತ್ತು, ನಿಂತ ನನ್ನಂತ ಅನೇಕರಿಗೆ ತಳಮಳ-'ಇನ್ನೇನು ಸಿಗ್ನಲ್ ಟೈಮ್ ಆಗುತ್ತೆ, ನಾಯಿ ಇನ್ನು ಅರ್ಧ ದಾರಿ ಕ್ರಮಿಸಿದೆಯಷ್ಟೇ ' ಅಂತ...ಎಲ್ಲಿಂದಲೋ ಒಬ್ಬ ಪುಣ್ಯಾತ್ಮ, ಬಂದು ಆ ಮರಿಯನ್ನ ಎತ್ತಿಕೊಂಡು ಹೊರಟರು, ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟು ಹೊರಟೆ, ಹಾಗೆ ಹೋಗುತ್ತಾ ರಸ್ತೆಯ ಬದಿಗೆ ಹೊರಳಿ ನೋಡಿದೆ-ನಾಯಿಯನ್ನ ಕೆಳಗಿಳಿಸಿದರು ಅವರು, ತಾವು ನಡೆದುಕೊಂಡು ಹೊರಟರು, ಆಗ ಗಮನಿಸಿದೆ- ಆ ವ್ಯಕ್ತಿಗೂ ಕಾಲು ಊನ ಅಂತ! ನನ್ನ ಮನಸಿನಲ್ಲಿ ಈ ಘಟನೆ ಉಳಿದು ಹೋಗಿದೆ-ಕೆಲವರೇ ಮಹಾತ್ಮರು ಯಾಕೆ ಆಗುತ್ತಾರೆ ಅಂತಲೂ ನನಗೆ ತಿಳಿವು ನೀಡಿದ ಘಟನೆ ಇದು.