ಹೊಸ ಲಿಫ್ಟ್ ನ ಕೆಲಸ ಭರದಿಂದ ಸಾಗಿದೆ .....ಆಹಾ! ಮುದ್ದಾದ ಹಕ್ಕಿಗಳೆರಡು ಲಿಫ್ಟ್ ನ ಸರಳುಗಳ ಅಂತರವೇ ಅರಿಯದಂತೆ ಒಂದರಿಂದ ಇನ್ನೊಂದಕ್ಕೆ ಹಾರುತ್ತಿವೆ. ಹೋ ! ಎಷ್ಟು ಸುಲಭ- 'ಗಾಳಿಯಲ್ಲಿ ಒಂದಾಗಿ ತೇಲಲು ಬೇಕಿರುವುದು ಹೊರಗಿನ ಶಕ್ತಿಯಲ್ಲ , ತನ್ನ ಇರಿವಿನ ನೆರಳಲ್ಲಿ ಕಳೆದು ಹೋಗದೇ ಇರುವುದು ಅಷ್ಟೆ'.
ಎಷ್ಟು ಭಾರ -ಎಂಬತ್ತ ನಾಲ್ಕು ಸಹಸ್ರ ವರ್ಷಗಳದ್ದೋ , ಈ ಜನ್ಮದಲ್ಲಿ ಗಳಿಸಿದ ಅಧಿಕಾರದ್ದೋ , ಹಣ -ಡಿಗ್ರಿ ಗಳದ್ದೋ , ಬಲ್ಲವರಾರು? ಈ ದೇಹದಿಂದ ಮಜಲುಗಳನ್ನು ಹತ್ತಲಾದೀತೇ? ತನುವಿನ ಭಾರದಿಂದ ಪಾತಾಳಕ್ಕಿಳಿದ ಮನುಜಾ ನಿನ್ನ ಎತ್ತಲು ಲಿಫ್ಟ್ ಅಲ್ಲದೆ ಬೇರೆ ಯಾರಿಂದ ಆದೀತು ?